ಸೋಮವಾರಪೇಟೆ, ಫೆ. ೧: ತಾಲೂಕಿನ ಯಡವನಾಡು ಮೀಸಲು ಅರಣ್ಯಕ್ಕೆ ಒತ್ತಿಕೊಂಡಿರುವ ಕಾರೇಕೊಪ್ಪ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸಾಕು ನಾಯಿಯ ಮೇಲೆ ಧಾಳಿ ನಡೆಸಿದೆ. ಚಿರತೆ ಧಾಳಿಯಿಂದ ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.
ನಿನ್ನೆ ತಡರಾತ್ರಿ ಕಾರೇಕೊಪ್ಪ ಗ್ರಾಮದ ಸುನಿಲ್ ಮತ್ತು ಕೃಷ್ಣ ಅವರ ಮನೆ ಬಳಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಸಾಕು ನಾಯಿಯನ್ನು ಹಿಡಿದು ಎಳೆದೊಯ್ಯುವ ಸಂದರ್ಭ ಜೋರಾಗಿ ಬೊಬ್ಬೆ ಹಾಕಿದ ಹಿನ್ನೆಲೆ ನಾಯಿಯನ್ನು ಬಿಟ್ಟು ಕತ್ತಲಲ್ಲಿ ಚಿರತೆ ಕಣ್ಮರೆಯಾಗಿದೆ. ಧಾಳಿಯಿಂದ ನಾಯಿ ಗಂಭೀರವಾಗಿ ಗಾಯಗೊಂಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜನವಸತಿ ಪ್ರದೇಶದಲ್ಲಿ ಚಿರತೆ ಕಂಡುಬAದ ಹಿನ್ನೆಲೆ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಚಿರತೆಯನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕೆAದು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಕಾರೇಕೊಪ್ಪ ಗ್ರಾಮವು ಯಡವನಾಡು ಮೀಸಲು ಅರಣ್ಯಕ್ಕೆ ಒತ್ತಿಕೊಂಡAತೆ ಇದ್ದು, ನೂರಾರು ಏಕರೆ ಕಾಫಿ ತೋಟವೂ ಅರಣ್ಯದ ಅಂಚಿನಲ್ಲಿಯೇ ಇದೆ. ತೋಟದೊಳಗೆ ಚಿರತೆ ಬೀಡು ಬಿಟ್ಟಿರುವ ಸಂಶಯವಿದ್ದು, ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಅರಣ್ಯ ಇಲಾಖಾ ಸಿಬ್ಬಂದಿಗಳು ಇಂದು ಬೆಳಗ್ಗಿನಿಂದಲೇ ಚಿರತೆಯ ಪತ್ತೆಗೆ ಕೂಂಬಿAಗ್ ಆರಂಭಿಸಿದ್ದಾರೆ. ಚಿರತೆಯ ಚಲನವಲನ ನೋಡಿಕೊಂಡು ಸೆರೆಹಿಡಿಯಲು ಬೋನು ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಶೈಲೇಂದ್ರ ತಿಳಿಸಿದ್ದಾರೆ.