ಸೋಮವಾರಪೇಟೆ, ಫೆ. ೨೧: ಹಿಂದೂ ಸಂಗಮ ಆಯೋಜನಾ ಸಮಿತಿಯ ಆಶ್ರಯದಲ್ಲಿ ತಾ. ೨೨ ರಂದು (ಇಂದು) ಸೋಮವಾರ ಪೇಟೆ ವ್ಯಾಪ್ತಿಯ ವಿವಿಧೆಡೆ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿ ಸಲಾಗಿದೆ. ನೇರುಗಳಲೆ ಮಂಡಲದ ಅಬ್ಬೂರುಕಟ್ಟೆ ಹಿಂದೂ ಸಂಗಮ ಆಯೋಜನ ಸಮಿತಿ ವತಿಯಿಂದ ತಾ. ೨೨ರಂದು (ಇಂದು) ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ೨ಕ್ಕೆ ಶೋಭಾಯಾತ್ರೆ ಆರಂಭಗೊಳ್ಳಲಿದ್ದು, ಮಂಗಳೂರಿನ ಭಜನೆ ತಂಡ, ನಾಸಿಕ್ ಬ್ಯಾಂಡ್, ಚಂಡೆ ವಾದ್ಯ ಹಾಗೂ ವೀರಗಾಸೆ ಯೊಂದಿಗೆ ತಣ್ಣೀರುಹಳ್ಳ ದೇವಸ್ಥಾನ ದಿಂದ ಅಬ್ಬೂರುಕಟ್ಟೆ ಜಂಕ್ಷನ್‌ವರೆಗೆ ತೆರಳಲಿದೆ.ಸಂಜೆ ೪ ಗಂಟೆಗೆ ಸಭಾ ಕಾರ್ಯಕ್ರಮ ಮನೇಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮಿ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ. ಅಧ್ಯಕ್ಷತೆಯನ್ನು ರಾಷ್ಟಿçÃಯ ಸ್ವಯಂ ಸೇವಕ ಸಂಘದ ಕೆ.ಎಲ್. ತಿಮ್ಮಯ್ಯ ಕರ್ಕಳ್ಳಿ ವಹಿಸಲಿದ್ದಾರೆ. ದಿಕ್ಸೂಚಿ ಭಾಷಣವನ್ನು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಕೇಶವಮೂರ್ತಿ ಮಾಡಲಿದ್ದಾರೆ. ಸೋಮೇಶ್ವರ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎನ್. ಪಾಪಯ್ಯ, ನೇರುಗಳಲೆ ಸ್ವಯಂ ಸೇವಕ ಪಿ.ಇ. ಚಂದ್ರಾಜು, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ರೂಪಾ ಸತೀಶ್, ಹೊಸಳ್ಳಿ ಕಾವೇರಿ, ಕೊಡಗು ಜಿಲ್ಲಾ ಜೇನು ಕುರುಬರ ಸಂಘದ ಅಧ್ಯಕ್ಷ ಜೆ.ಜೆ. ರಮೇಶ್ ಪಾಲ್ಗೊಳ್ಳಲಿದ್ದಾರೆ ಎಂದು ಅಬ್ಬೂರುಕಟ್ಟೆ ಮಂಡಲ ಹಿಂದೂ ಸಂಗಮ ಸಮಿತಿ ಅಧ್ಯಕ್ಷ ಪಿ.ಡಿ. ಪ್ರಕಾಶ್ ತಿಳಿಸಿದ್ದಾರೆ. ಹಾನಗಲ್ಲು ಮಂಡಲದ ವತಿಯಿಂದ ಮಧ್ಯಾಹ್ನ ೨ ಗಂಟೆಗೆ ಹಿಂದೂ ಸಂಗಮ ಕಾರ್ಯಕ್ರಮದ ಅಂಗವಾಗಿ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮ ಆಯೋಜನೆಗೊಂಡಿದೆ. ಮಧ್ಯಾಹ್ನ ಹಾನಗಲ್ಲು ಗ್ರಾ.ಪಂ. ಕಚೇರಿಯಿಂದ ಯಡೂರು ಗ್ರಾಮದವರೆಗೆ ಮೆರವಣಿಗೆ ನಡೆಯಲಿದ್ದು, ನಂತರ ಮೈದಾನದಲ್ಲಿ ಸಮಾವೇಶ ಜರುಗಲಿದೆ. ಗಣಗೂರು ಮಂಡಲದ ವತಿಯಿಂದ ಬೆಳಿಗ್ಗೆ ೧೦ ಗಂಟೆಯಿAದ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ. ಶೋಭಾಯಾತ್ರೆಯ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ತಾಲೂಕು ಸಮಿತಿಯ ಪ್ರಕಟಣೆ ತಿಳಿಸಿದೆ.