ಮಡಿಕೇರಿ, ಫೆ. ೨೧: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರ ಅನುದಾನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಚೇರಿಯ ನವೀಕರಣಗೊಂಡ ಸಭಾಂಗಣದ ಉದ್ಘಾಟನಾ ಸಮಾರಂಭ ಹಾಗೂ ಸಂಸ್ಥಾಪಕರ ಮತ್ತು ವಿಶ್ವ ಚಿಂತನಾ, ವಿಶ್ವ ಭ್ರಾತೃತ್ವ ದಿನಾಚರಣೆ ಹಾಗೂ ಜಿಲ್ಲಾ ಪುರಸ್ಕಾರ್ ಪ್ರಶಸ್ತಿ ಪತ್ರ ವಿತರಣೆ ಸಮಾರಂಭವು ತಾ. ೨೨ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದ ಪೊನ್ನಮ್ಮ ಕುಶಾಲಪ್ಪ ಭವನದಲ್ಲಿ ನಡೆಯಲಿದೆ.

ಶಾಸಕ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಬೇಬಿ ಮ್ಯಾಥ್ಯು, ಮಡಿಕೇರಿ ತಹಶೀಲ್ದಾರ್ ಶ್ರೀಧರ ಆರ್., ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ಸ್ಕೌಟ್ಸ್ ಜಿಲ್ಲಾ ಆಯುಕ್ತರಾದ ಜಿಮ್ಮಿ ಸಿಕ್ವೆರಾ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ. ರಾಜೇಶ್, ಪದ್ಮಶ್ರೀ ಪುರಸ್ಕೃತರು ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ಗೈಡ್ಸ್ ಜಿಲ್ಲಾ ಆಯುಕ್ತರಾದ ರಾಣಿ ಮಾಚಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಆರ್.ಪಿ.ಚಂದ್ರಶೇಖರ್, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಖಜಾಂಚಿ ಟಿ.ಎಂ. ಮುದ್ದಯ್ಯ, ಸ್ಥಾನಿಕ ಆಯುಕ್ತ ಎಚ್.ಆರ್.ಮುತ್ತಪ್ಪ, ಜಿಲ್ಲಾ ಕಾರ್ಯದರ್ಶಿ ಎಂ.ಎA.ವಸAತಿ, ಸಹಾಯಕ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಜಿಲ್ಲಾ ಸಂಘಟಕರಾದ ಯು.ಸಿ.ದಮಯಂತಿ, ಜಿಲ್ಲಾ ಸಹಾಯಕ ಸ್ಕೌಟ್ಸ್ ಆಯುಕ್ತರಾದ ಕೆ.ಬಿ. ಗಣೇಶ್, ಜಿಲ್ಲಾ ಸಹಾಯಕ ಗೈಡ್ಸ್ ಆಯುಕ್ತರಾದ ಸಿ.ಎಂ. ಸುಲೋಚನ, ಜಿಲ್ಲಾ ತರಬೇತಿ ಆಯುಕ್ತರಾದ ಕೆ.ಯು.ರಂಜಿತ್, ಮೈಥಿಲಿ ರಾವ್ ಹೆಚ್. ಇತರರು ಪಾಲ್ಗೊಳ್ಳಲಿದ್ದಾರೆ.