ಕಣಿವೆ, ಫೆ. ೨೧: ದಾನ ಹಾಗೂ ಧರ್ಮದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಆದಿಚುಂಚನಗಿರಿ ಶಾಖಾ ಮಠ ಹಾಸನದ ಶ್ರೀ ಶಂಭುನಾಥಸ್ವಾಮೀಜಿ ಹೇಳಿದರು.

ಮುಳ್ಳುಸೋಗೆ ಗ್ರಾಮದೇವತೆ ಕನ್ನಂಬಾಡಿ ಅಮ್ಮನವರ ನೂತನ ದೇವಾಲಯ ಹಾಗೂ ಗೋಪುರಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ದೇವಾಲಯ ನಿರ್ಮಾಣಕ್ಕೆ ಸಹಕಾರ ನೀಡಿದ ದಾನಿಗಳನ್ನು ಗೌರವಿಸಿ ಆಶೀರ್ವಚನ ನೀಡಿದ ಶ್ರೀಗಳು, ಹುಟ್ಟಿದ ಮನುಷ್ಯನು ಪ್ರತಿ ದಿನವೂ ಪ್ರತೀ ಕ್ಷಣವೂ ಸಾವಿನ ಕಡೆಯೇ ಪ್ರಯಾಣ ಮಾಡುತ್ತಾನೆ ಎಂಬ ಸತ್ಯ ತಿಳಿದುಕೊಳ್ಳಬೇಕು. ತಂದೆ ತಾಯಿ ಹಾಗೂ ಒಡಹುಟ್ಟಿದ ಸೋದರಿಯರ ಕಣ್ಣಲ್ಲಿ ನೀರು ತರಿಸದಿರುವ ಮನೆಗಳು ಸ್ವರ್ಗಕ್ಕೆ ಮಿಗಿಲಾದುದು. ಹುಟ್ಟು ಹಾಗೂ ಸಾವಿನ ನಡುವೆ ತನ್ನ ಅಂತರAಗ ಸ್ವಚ್ಛತೆ ಹಾಗೂ ಸದಾಚಾರಗಳ ಮೂಲಕ ಭಗವಂತನಿಗೆ ಹತ್ತಿರವಾಗಬೇಕಿದೆ. ಭಗವಂತ ಕೊಟ್ಟ ಸಂಪತ್ತನ್ನು ದಾನ ಧರ್ಮಗಳಿಗೆ ವಿನಿಯೋಗಿಸುವ ಮೂಲಕ ಪುಣ್ಯವನ್ನು ಪ್ರಾಪ್ತಿ ಮಾಡಿಕೊಳ್ಳಲು ಶಂಭುನಾಥ ಸ್ವಾಮೀಜಿ ಕರೆ ನೀಡಿದರು.

ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಮನುಷ್ಯ ಅಂತರAಗದ ಸ್ವಚ್ಛತೆಗೆ ತನ್ನ ಬದುಕನ್ನು ಒಯ್ಯುವ ಮೂಲಕ ಆತ್ಮತೃಪ್ತಿಯೊಂದಿಗೆ ಸುಂದರ ಸಮಾಜ ನಿರ್ಮಿಸಬಹುದಾಗಿದೆ. ಪರಸ್ಪರ ಸಂಬAಧಗಳು ಮೌಲ್ಯ ಕಳೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಕೇವಲ ಗಳಿಕೆಯತ್ತ ಮುಖ ಮಾಡುತ್ತಾ ಸುಖ ಸಂತೋಷವನ್ನು ಕಳೆದುಕೊಳ್ಳುತ್ತಿರುವ ಮನುಷ್ಯನಿಗೆ ಬೇಕಾದ ಶಾಂತಿ ಹಾಗೂ ನೆಮ್ಮದಿಗೆ ದೇವಾಲಯಗಳು, ಮಠ- ಮಂದಿರಗಳು ದಿವ್ಯ ಔಷಧಿ ಇದ್ದಂತೆ. ಇವನಾರವ ಎನ್ನದೇ ಇವ ನಮ್ಮವ ಎಂಬ ಶರಣರ ನುಡಿಗಳಂತೆ ಎಲ್ಲರೂ ಪರಸ್ಪರ ಪ್ರೀತಿ, ಸಾಮರಸ್ಯ, ಗೌರವದಿಂದ ಬದುಕಲು ಕರೆ ನೀಡಿದರು.

ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡುತ್ತಾ, ಮನುಷ್ಯ ದೇವಿಯ ಆರಾಧನೆ, ಭಗವಂತನ ಭಜನೆ, ಸತ್ಸಂಗಗಳ ಮೂಲಕ ಅಂತರAಗದ ಬಾಗಿಲು ತೆರೆದುಕೊಳ್ಳಬೇಕಿದೆ. ಭಗವಂತನು ಮನುಷ್ಯನಿಗೆಂದೇ ಸೃಷ್ಟಿಸಿರುವ ಪರಸರ, ನೀರು, ಭೂಮಿ, ಮರ - ಗಿಡಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಡುಗೊರೆಯಾಗಿ ನೀಡಬೇಕಿದೆ ಎಂದರು.

ಕನ್ನಂಬಾಡಿ ಅಮ್ಮ ದೇವಾಲಯ ಸಮಿತಿ ಗೌರವ ಅಧ್ಯಕ್ಷ ಎಂ.ಕೆ.ದಿನೇಶ್ ಮಾತನಾಡಿದರು. ಸಮಿತಿಯ ಅಧ್ಯಕ್ಷ ಎಂ.ಹೆಚ್.ಅಣ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಉಪಾಧ್ಯಕ್ಷ ಎಂ.ಆರ್.ನAಜುAಡ, ಕಾರ್ಯದರ್ಶಿ ಪ್ರವೀಣ್, ಖಜಾಂಚಿ ದಾಸೇಗೌಡ, ನಿರ್ದೇಶಕರಾದ ಪಳನಿಸ್ವಾಮಿ, ಎಂ.ಆರ್.ಮಹದೇವಪ್ಪ, ಎಂ.ಬಿ.ಸುರೇಶ್ ಕುಮಾರ್, ಎಂ.ಹೆಚ್.ಚAದ್ರಪ್ಪ, ಎಂ.ಎಸ್.ಪ್ರಸನ್ನ, ವಿ.ಎ.ದಿನೇಶ್, ಎಂ.ಸಿ.ಸAತೋಷ್, ಎಂ.ಟಿ.ರಘು, ಎಂ.ಕೆ.ಚAದ್ರು,ಅಜಿತ್ ಕುಮಾರ್, ರಂಗಸ್ವಾಮಿ ಇದ್ದರು. ನಿವೃತ್ತ ಶಿಕ್ಷಕ ಉ.ರಾ.ನಾಗೇಶ್ ನಿರೂಪಿಸಿದರು.