ನಾಪೋಕ್ಲು, ಫೆ. ೨೧: ವಿವೇಕ ವೇದಿಕೆಯ ವತಿಯಿಂದ ಹಾಕತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ೭ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ನಬೀಲ್ ಪ್ರಥಮ ಸ್ಥಾನ ಪಡೆದರು. ೭ನೇ ತರಗತಿ ವಿದ್ಯಾರ್ಥಿ ನಿತಿನ್ ಹಾಗೂ ೬ನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಬಹುಮಾನ ಗಳಿಸಿದರು.
ಪ್ರಥಮ ಬಹುಮಾನ ರೂ.೧೫೦೦, ದ್ವಿತೀಯ ಬಹುಮಾನ ರೂ. ೧೦೦೦ ಹಾಗೂ ತೃತೀಯ ಬಹುಮಾನ ರೂ. ೫೦೦ ವಿತರಿಸಲಾಯಿತು.
ವಿವೇಕ ವೇದಿಕೆಯ ನಿರ್ದೇಶಕ ಪೊಕ್ಕುಳಂಡ್ರ ಪ್ರಹ್ಲಾದ್ ಪ್ರಾಯೋಜಕತ್ವದಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು. ಬಹುಮಾನಗಳನ್ನು ಪೊಕ್ಕುಳಂಡ್ರ ಪ್ರಹ್ಲಾದ್ ವಿತರಿಸಿ ಮಾತನಾಡಿ, ಮಕ್ಕಳಿಗೆ ಓದಿನ ಬಗ್ಗೆ ಹೆಚ್ಚು ಆಸಕ್ತಿ ವಹಿಸಲು ಇಂತಹ ರಸಪ್ರಶ್ನೆ ಕಾರ್ಯಕ್ರಮಗಳು ಸಹಕಾರಿ ಎಂದರು.
ರಸಪ್ರಶ್ನೆ ಕಾರ್ಯಕ್ರಮದಲ್ಲಿ ಒಂದರಿAದ ಏಳನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಕುಮಾರಸ್ವಾಮಿ ಟಿ.ಬಿ, ಸಹ ಶಿಕ್ಷಕಿ ವಿನೂತ, ಪವೀನ ಹಾಗೂ ಅತಿಥಿ ಶಿಕ್ಷಕಿ ಸರಸ್ವತಿ ಉಪಸ್ಥಿತರಿದ್ದರು.