ವೀರಾಜಪೇಟೆ, ಫೆ. ೨೧: ಪೆರುಂಬಾಡಿ ಗ್ರಾಮದ ಯೂತ್ ಫ್ರೆಂಡ್ಸ್ ಸಂಘದ ವತಿಯಿಂದ ಅಯ್ಯಪ್ಪ ಭಜನಾ ಮಂದಿರದ ಆವರಣದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ೫ನೇ ವರ್ಷದ ಹೊನಲು ಬೆಳಕಿನ ಪ್ರೋ ಮ್ಯಾಟ್ ಕಬಡ್ಡಿ ಲೀಗ್ ಪಂದ್ಯಾಟ ನಡೆಯಿತು.

ಪೆರುಂಬಾಡಿಯ ಬ್ಲಾಕ್ ಪ್ಯಾಂಥರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಡ್ರೀಮ್ ವರ್ಲ್ಡ್ ತಂಡ ರನ್ನರ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಈ ಸಂದರ್ಭ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ. ಗಣೇಶ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾಕೂಟ ಹಮ್ಮಿಕೊಳ್ಳುವುದರಿಂದ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ ಎಂದರು. ಯೂತ್ ಫ್ರೆಂಡ್ಸ್ನ ಅಧ್ಯಕ್ಷ ಹರೀಶ್ ಕುಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಚ್ಚಪಂಡ ಮಹೇಶ್ ಗಣಪತಿ, ಕೆ.ಡಿ.ಪಿ. ಸದಸ್ಯ ಶಶಿ, ಮಾಜಿ ಸೈನಿಕ ವಾಸು, ಸಿ.ಆರ್. ಬಾಬು, ಕೆ.ಕೆ. ಅನಿಲ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯೂತ್ ಫ್ರೆಂಡ್ಸ್ನ ನಿಕೀಲ್ ಉಣ್ಣಿ, ಶಿವಪ್ಪ, ಸೇರಿದಂತೆ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

ವಿಜೇತ ತಂಡಕ್ಕೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು. ಯೂತ್ ಫ್ರೆಂಡ್ಸ್ ಪೆರುಂಬಾಡಿ ಸಂಘದ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ವಿವಿಧ ತಂಡಗಳ ಮಾಲೀಕರು, ಕ್ರೀಡಾಪಟುಗಳು ಹಾಜರಿದ್ದರು.