ಸುಂಟಿಕೊಪ್ಪ, ಫೆ. ೨೨: ಇಲ್ಲಿನ ಗ್ರಾಮದೇವರ ೭ನೇ ವರ್ಷದ ವಾರ್ಷಿಕ ಪೂಜೋತ್ಸವ ಸುಂಟಿಕೊಪ್ಪ ವ್ಯಾಪ್ತಿಯ ವಿವಿಧ ದೇವಸ್ಥಾನ ಸಮಿತಿಗಳ ಸಹಭಾಗಿತ್ವದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ಪಟ್ಟಣದ ೨ನೇ ವಿಭಾಗದಲ್ಲಿರುವ ಗ್ರಾಮದೇವರ ಬನದಲ್ಲಿ ಸುಂಟಿಕೊಪ್ಪದ ವಿವಿಧ ದೇವಾಲಯಗಳಾದ ಶ್ರೀ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಸ್ಥಾನ ಸಮಿತಿ, ಶ್ರೀ ರಾಮ ಸೇವಾ ಸಮಿತಿ, ಶ್ರೀ ಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರ ಸಮಿತಿ, ಶ್ರೀ ಗೌರಿ ಗಣೇಶೋತ್ಸವ ಸಮಿತಿ, ಶ್ರೀ ಮಸಣಿಕಮ್ಮ ದೇವಸ್ಥಾನ ಸಮಿತಿ, ವೃಕ್ಷೆÆÃದ್ಭವ ಶ್ರೀ ಮಹಾಗಣಪತಿ ದೇವಾಲಯ ಸಮಿತಿ ಮಧುರಮ್ಮ ಬಡಾವಣೆ, ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸಮಿತಿ ಟಿಸಿಎಲ್, ಶ್ರೀ ಅಣ್ಣಪ್ಪ ದೇವಸ್ಥಾನ ಸಮಿತಿ ಶ್ರೀದೇವಿ, ಶ್ರೀ ಚಾಮುಂಡೇಶ್ವರಿ, ಶ್ರೀ ಮುತ್ತಪ್ಪ ಸೇವಾ ಸಮಿತಿ ಬಾಳೆಕಾಡು, ಶ್ರೀ ಕೊಡಂಗಲ್ಲೂರು ಕುರುಂಬ ಭಗವತಿ ದೇವಾಲಯ ಗದ್ದೆಹಳ್ಳ, ಶ್ರೀ ನಾಗದೇವತೆ ದೇವಸ್ಥಾನ ಮಧುರಮ್ಮ ಬಡಾವಣೆ, ಶ್ರೀ ಮಳೂರು ಬೆಳ್ಳಾರಿಕಮ್ಮ ದೇವಾಲಯ ಸಮಿತಿ, ಶ್ರೀ ಬಸವೇಶ್ವರ ದೇವಾಲಯ ಸಮಿತಿ ಗದ್ದೆಹಳ್ಳ ಇವುಗಳ ಸಹಭಾಗಿತ್ವದಲ್ಲಿ ಪೂಜೋತ್ಸವ ನಡೆಯಿತು.

ಅರ್ಚಕ ಗಣೇಶ್ ಭಟ್ ಅವರಿಂದ ಸ್ಥಳ ಶುದ್ಧಿ ಕಲಶದೊಂದಿಗೆ ಪೂಜಾ ವಿಧಿವಿಧಾನಗಳು ನಡೆದವು. ಕುಂಕುಮಪೂಜೆ, ಅಲಂಕಾರ ಪೂಜೆಯ ನಂತರ ೧೦.೩೦ ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು. ಭಕ್ತರು ಗ್ರಾಮ ದೇವತೆಗೆ ಹರಕೆ ಒಪ್ಪಿಸಿದರು.

ಸಮಿತಿಯ ಅಧ್ಯಕ್ಷ ಎ. ಶ್ರೀಧರ್ ಕುಮಾರ್, ಕಾರ್ಯದರ್ಶಿ ಸುರೇಶ್ ಗೋಪಿ, ಖಜಾಂಚಿ ದಿನು ದೇವಯ್ಯ, ಉಪಾಧ್ಯಕ್ಷ ಬಿ.ಡಿ. ರಾಜು ರೈ, ಜೆ.ಎನ್. ಚಂದ್ರಶೇಖರ್, ಸಲಹಾ ಸಮಿತಿಯ ಎ. ಲೋಕೇಶ್ ಕುಮಾರ್, ಶಾಂತರಾಮ್ ಕಾಮತ್, ಬಸವರಾಜು, ಸಂಘಟನಾ ಕಾರ್ಯದರ್ಶಿಗಳಾದ ಧನು ಕಾವೇರಪ್ಪ, ಎಂ.ಎಸ್. ಸುನಿಲ್, ಸಹ ಕಾರ್ಯದರ್ಶಿ ಎ. ಶ್ರೀಧರನ್, ಅಯ್ಯಪ್ಪ, ಪಿ.ಆರ್. ಸುನಿಲ್ ಕುಮಾರ್, ಪಟ್ಟೆಮನೆ ಕುಟುಂಬಸ್ಥರಾದ ಪಿ.ಪಿ. ಉದಯಕುಮಾರ್, ಪಟ್ಟೆಮನೆ ಸದಾಶಿವ, ಸದಾಶಿವ ರೈ, ಸಂತೋಷ್, ರವಿ, ಶಿವಕುಮಾರ್, ಸಿ.ಸಿ. ಸುನಿಲ್, ಎಂ.ಆರ್. ಶಶಿಕುಮಾರ್, ಬಿ.ಕೆ. ಪ್ರಶಾಂತ್, ಪ್ರೀತಂ ಪ್ರಭಾಕರ್, ಪಿ.ಆರ್. ಸುಕುಮಾರ್ ಸೇರಿದಂತೆ ವಿವಿಧ ದೇವಾಲಯ ಸಮಿತಿಗಳ ಪದಾಧಿಕಾರಿಗಳು ಹಾಜರಿದ್ದರು.