ಕೊಡ್ಲಿಪೇಟೆ, ಫೆ. ೨೨: ಕರ್ನಾಟಕ ಪೆಂಟೆಕೋಸ್ಟಲ್ ಚರ್ಚಸ್ ಅಸೋಸಿಯೇಷನ್ ನೇತೃತ್ವದಲ್ಲಿ ಪಾಸ್ಟರ್‌ಗಳು, ಲೀಡರ್‌ಗಳು ಹಾಗೂ ಅವರ ಕುಟುಂಬ ಸದಸ್ಯರುಗಳಿಗೆ ವಿಶೇಷ ಫ್ಯಾಮಿಲಿ ಕಾನ್ಫರೆನ್ಸ್ ಕೊಡ್ಲಿಪೇಟೆಯ ಐ.ಪಿ.ಸಿ. ಚರ್ಚ್ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರಿನಿAದ ಆಗಮಿಸಿದ ಮುಖ್ಯ ಭಾಷಣಕಾರರಾದ ಪಾಸ್ಟರ್ ಅಬ್ರಹಾಂ ವರ್ಗೀಸ್ ಅವರು ಆತ್ಮೀಯ ಪ್ರೇರಣೆಯ ಸಂದೇಶವನ್ನು ನೀಡಿದರು. ಕುಟುಂಬ ಜೀವನವನ್ನು ಬಲಪಡಿಸುವ ಬೈಬಲ್ ಆಧರಿತ ಆಲೋಚನೆಗಳು ಮತ್ತು ಪ್ರಾಯೋಗಿಕ ಮಾರ್ಗದರ್ಶನ ಗಳನ್ನು ಅವರು ಹಂಚಿಕೊAಡರು. ಕುಟುಂಬವು ಒಟ್ಟಾಗಿ ಪ್ರಾರ್ಥಿಸಿದಾಗ, ಒಟ್ಟಾಗಿ ನಿಂತಾಗ, ಒಬ್ಬರ ನೋವನ್ನು ಮತ್ತೊಬ್ಬರು ಹಂಚಿಕೊAಡಾಗ ಅಲ್ಲಿ ದೇವರ ಶಕ್ತಿ ಕಾರ್ಯನಿರ್ವಹಿಸುತ್ತದೆ. ವಿಭಜನೆ ತರಲು ಶತ್ರುವಿನ ಪ್ರಯತ್ನ; ಆದರೆ ಪ್ರೀತಿ ಮತ್ತು ಐಕ್ಯತೆ ಇರುವ ಸ್ಥಳದಲ್ಲಿ ಶತ್ರುವಿಗೆ ಸ್ಥಾನವಿಲ್ಲ. ಐಕ್ಯತೆ ನಮ್ಮ ಶಕ್ತಿ; ಪ್ರೀತಿಯೇ ನಮ್ಮ ಜಯ ಎಂದು ಅವರು ತಿಳಿಸಿದರು. ಇದೇ ಸಂದರ್ಭ ಕುಟುಂಬಗಳಲ್ಲಿ ಐಕ್ಯತೆಯ ಅಗತ್ಯತೆಯನ್ನು ಒತ್ತಿಹೇಳಿದರು.

ಕೆ.ಪಿ.ಸಿ.ಎ. ಅಧ್ಯಕ್ಷ ಅಬ್ರಹಾಂ ಕೋಶಿ ಮಾತನಾಡಿದರು. ಸಮಾವೇಶದಲ್ಲಿ ಕೊಡ್ಲಿಪೇಟೆ ಐ.ಪಿ.ಸಿ. ಚರ್ಚ್ನ ಪಾಸ್ಟರ್ ಫ್ರೆಡ್ಡಿ ಪಿ.ಸಿ, ಕೆ.ಪಿ.ಸಿ.ಎ. ಉಪಾಧ್ಯಕ್ಷ ಜೋಶುವ, ಕಾರ್ಯದರ್ಶಿ ಮಂಜುನಾಥ್ ಹಾಗೂ ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಪಾಸ್ಟರ್‌ಗಳು ಉಪಸ್ಥಿತರಿದ್ದರು.