ಕೂಡಿಗೆ, ಫೆ. ೨೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೇನುಕಲ್ಲು ಬೆಟ್ಟದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಟಿ.ಕೆ. ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಗೊಂಡರು.
ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ತಲಾ ಒಂದು ನಾಮಪತ್ರಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಟಿ.ಕೆ. ಚಂದ್ರಶೇಖರ್, ಉಪಾಧ್ಯಕ್ಷರಾಗಿ ಕೆ.ಆರ್. ಜಗದೀಶ್ ಸತತವಾಗಿ ನಾಲ್ಕನೇ ಬಾರಿಗೆ ಆಯ್ಕೆಗೊಂಡರು. ಈ ಸಂದರ್ಭ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಎಂ.ಕೆ.ಅಪ್ಪಾಜಿ, ಚಂದ್ರೇಗೌಡ, ವಿ.ಎಲ್. ಪ್ರಕಾಶ್, ಬಸವರಾಜ್, ನಾಗೇಶ್, ಎಸ್.ಜೆ. ಬಸವರಾಜ್, ಮೋಹನ್, ಅನ್ನಮ್ಮ, ಜ್ಯೋತಿ, ಸೇರಿದಂತೆ ಚುನಾವಣಾ ಅಧಿಕಾರಿ ಆಶಾ ಮತ್ತು ಸಂಘದ ಕಾರ್ಯನಿರ್ವಹಣಾಧಿಕಾರಿ ಬಸವರಾಜ್ ಇದ್ದರು.