ಕಣಿವೆ, ಫೆ. ೨೨: ಕಾಡಾನೆಗಳು ದಾಳಿ ನಡೆಸಿ ಕೃಷಿ ಫಸಲು ನಾಶಗೊಳಿಸಿದ ಘಟನೆ ನಂಜರಾಯಪಟ್ಟಣದ ಗುಳಿಗದಲ್ಲಿ ಶನಿವಾರ ರಾತ್ರಿ ನಡೆದಿದೆ.

ಆಹಾರ ಅರಸಿ ಮರಿಯಾನೆ ಸಹಿತ ಆಗಮಿಸಿದ ನಾಲ್ಕು ಕಾಡಾನೆಗಳ ಹಿಂಡು ಗ್ರಾಮದ ರತೀಶ್ ಹಾಗೂ ಸುಮಿ ಕೃಷಿಕ ದಂಪತಿ ತೋಟದ ಅಡಿಕೆ, ಬಾಳೆ, ತೆಂಗು ಫಸಲು ತಿಂದು ಹಾನಿ ಮಾಡಿ ತೆರಳಿವೆ. ಜೊತೆಗೆ ನೀರಾವರಿಗೆ ಅಳವಡಿಸಿದ್ದ ಸ್ಪಿçಂಕ್ಲರ್ ಪೈಪ್‌ಗಳು ಹಾಗೂ ಜೆಟ್‌ಗಳನ್ನು ಹಾನಿಗೊಳಿಸಿದೆ.

ಇದರಿಂದಾಗಿ ಕೃಷಿಕ ದಂಪತಿಗೆ ಲಕ್ಷಾಂತರ ರೂಗಳ ನಷ್ಟ ಸಂಭವಿಸಿದೆ. ಗುಳಿಗ ಗ್ರಾಮ ವ್ಯಾಪ್ತಿಯಲ್ಲಿ ಇರುವ ಬಹುತೇಕ ಕೃಷಿಕರಿಗೆ ಹಕ್ಕುಪತ್ರಗಳು ಹಾಗೂ ಕೃಷಿಗೆ ಸಂಬAಧಿತ ಯಾವುದೇ ಸೌಲಭ್ಯಗಳು ಮರೀಚಿಕೆಯಾಗಿರುವ ಕಾರಣ ಅರಣ್ಯ ಇಲಾಖೆಗೆ ಬೆಳೆ ನಷ್ಟ ಪರಿಹಾರ ಕೇಳಲು ಸಾಧ್ಯವಾಗುತ್ತಿಲ್ಲ ಎಂದು ಕೃಷಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ.