ಸೋಮವಾರಪೇಟೆ, ಫೆ. ೨೩: ಅಂಕ ಗಳಿಕೆಯಷ್ಟೇ ಜೀವನದ ಗುರಿಯಲ್ಲ; ದೇಶಭಕ್ತಿ ಮೂಡಿಸದ ವಿದ್ಯೆ ವ್ಯರ್ಥ ಎಂದು ಸಾಮಾಜಿಕ ಕಾರ್ಯಕರ್ತ ದೋ. ಕೇಶವಮೂರ್ತಿ ಪ್ರತಿಪಾದಿಸಿದರು.

ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬೂರುಕಟ್ಟೆ ಹಿಂದೂ ಸಂಗಮ ಆಯೋಜನಾ ಸಮಿತಿಯ ವತಿಯಿಂದ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಷ್ಟಿçÃಯ ಸ್ವಯಂಸೇವಕ ಸಂಘ ೧೦೦ ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಸಮಾಜದ ಜಾಗೃತಿಗೆ ಹೊಸ ದಿಕ್ಕು ತೋರಿಸುವ ಹಿನ್ನೆಲೆ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದ ಅವರು, ಮಕ್ಕಳು ಜೀವನದಲ್ಲಿ ನಿಜವಾದ ಬಿಗ್‌ಬಾಸ್ ಆಗಬೇಕಾದರೆ ಹನುಮಾನ್ ಚಾಲೀಸ್ ಪಠಣೆಯಿಂದ ಸಾಧ್ಯ. ಭಗತ್ ಸಿಂಗ್, ಸುಖದೇವ್, ಚಂದ್ರಶೇಖರ್ ಆಜಾದ್ ಅವರಂತಹ ಅಪ್ರತಿಮ ದೇಶಪ್ರೇಮಿಗಳ ಜೀವನ ಇತಿಹಾಸ ತಿಳಿಸಬೇಕು ಎಂದರು. ತಾಯಂದಿರು ಮಕ್ಕಳಿಗೆ ಮೊಬೈಲ್, ಟಿವಿಯಲ್ಲಿ ಬರುವಂತಹ ಪ್ರಯೋಜನಕ್ಕೆ ಬಾರದ ಕಾರ್ಯಕ್ರಮಗಳನ್ನು ತೋರಿಸಿ ಜೀವನದ ದಾರಿ ತಪ್ಪಿಸಬಾರದು. ಧರ್ಮ, ದೇಶ, ಸಮಾಜದ ಉನ್ನತಿಗೆ ಶ್ರಮಿಸಿದವರ ಜೀವನಾದರ್ಶ ತಿಳಿಸಬೇಕು ಎಂದು ಕರೆ ನೀಡಿದರು.

ಮಕ್ಕಳಲ್ಲಿ ದೇಶಭಕ್ತಿಯ ಅರಿವು ಮೂಡಿಸಬೇಕು. ಶಿಸ್ತಿನ ಸಿಪಾಯಿಗಳಂತೆ ಬೆಳೆಸಬೇಕು. ದೇಶಕ್ಕಾಗಿ ಹೋರಾಡಿದವರನ್ನು ಸ್ಮರಿಸಿ ಅವರ ಚಿಂತನೆಗಳನ್ನು ಮಕ್ಕಳಲ್ಲಿ ಬಿತ್ತಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮನೆಹಳ್ಳಿ ಮಠಾಧೀಶರಾದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ಹಿಂದೂ ಧರ್ಮದ ಉಜ್ವಲತೆಯನ್ನು ತೋರಿಸುವಲ್ಲಿ ಹಿಂದೂಸAಗಮದ ಮೂಲಕ ನಾವು ಯಶಸ್ವಿಯಾಗಿದ್ದೇವೆ. ಭಾರತವು ಧಾರ್ಮಿಕ ಇತಿಹಾಸ ಹೊಂದಿದ ರಾಷ್ಟçವಾಗಿದ್ದು, ಸಹಸ್ರಾರು ಋಷಿಮುನಿಗಳು, ಯೋಗಿಗಳು, ತ್ಯಾಗಿಗಳು ಮನುಕುಲದ ಒಳಿತಿಗೆ ಸಾಕಷ್ಟು ಶ್ರಮಿಸಿದ್ದಾರೆ. ಈ ನಿಟ್ಟಿನಲ್ಲಿ ಹಿಂದುಗಳಾದ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದರು.

ಕಾರ್ಯಕ್ರಮಕ್ಕೂ ಮುನ್ನ ತಣ್ಣೀರುಹಳ್ಳ ಬಸವೇಶ್ವರ ದೇವಾಲಯದಿಂದ ಅಬ್ಬೂರುಕಟ್ಟೆ ಜಂಕ್ಷನ್‌ವರೆಗೂ ವಿವಿಧ ರೀತಿಯ ಸ್ತಬ್ಧಚಿತ್ರ ಗಳು, ಚಂಡೆ ವಾದ್ಯ, ಮಕ್ಕಳ ನೃತ್ಯದೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಸಮಾಜ ಬಾಂಧವರು ಭವ್ಯ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಮಂಡಲ ಅಧ್ಯಕ್ಷ ಪಿ.ಡಿ. ಪ್ರಕಾಶ್, ಪ್ರಮುಖರಾದ ಪಾಪಯ್ಯ, ಪಿ.ಈ. ಚಂದ್ರಾಜು ನೇರುಗಳಲೆ, ರೂಪ ಸತೀಶ್, ಕಾವೇರಿ ಹೊಸಳ್ಳಿ, ಜೆ.ಜೆ. ರಮೇಶ್ ಇದ್ದರು