ನಾಪೋಕ್ಲು, ಫೆ. ೨೩: ಸಮೀಪದ ಶ್ರೀ ಚೆವೋಟ್ ಶಾಸ್ತಾವು ಈಶ್ವರ ದೇವರ ವಾರ್ಷಿಕ ಉತ್ಸವ ನಡೆಯಿತು. ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಬಳಿಕ ಬಾಳೆಯಡ ಐನ್‌ಮನೆಯ ಮುಡಿ ತೆರೆ ಉತ್ಸವದಲ್ಲಿ ಪಾಲ್ಗೊಂಡರು.

ದೇವರ ಉತ್ಸವದ ಬಳಿಕ, ಬಾಳೆಯಡ ಕುಟುಂಬದ ಹಿರಿಯರು ಶಾಸಕರನ್ನು ಸನ್ಮಾನಿಸಿದರು. ಈ ಸಂದರ್ಭ ಅಧ್ಯಕ್ಷ ನಾಟೋಳಂಡ ಚರ್ಮಣ್ಣ, ದೇವತಕ್ಕ ಬಸಪ್ಪ, ತೊರೇರ ಮುದ್ದಯ್ಯ, ಅರುಣ್ ಬಾಳೆಯಡ, ಕರುಣ್ ಕಾಳಪ್ಪ, ಕಡಿಯತ್‌ನಾಡಿನವರು, ಊರಿನವರು, ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯ ಮಾಚೇಟಿರ ಕುಸು ಕುಶಾಲಪ್ಪ, ಕುಲ್ಲೇಟಿರ ಅರುಣ್ ಬೇಬ, ಹೇಮಾವತಿ, ಬಿ.ಕೆ ಸುಬ್ರಮಣಿ, ಹರೀಶ್, ದಿವ್ಯ, ಪ್ರತೀಶ್, ಅಪ್ಪಸ್ವಾಮಿ, ಪೂಣಚ್ಚ, ದೀಪು, ಬಾಳೆಯಡ ಕುಟುಂಬಸ್ಥರು ಹಾಗೂ ಪ್ರಮುಖರು ಹಾಜರಿದ್ದರು.