ಗೋಣಿಕೊಪ್ಪ ವರದಿ, ಫೆ. ೨೩: ಮಡಿಕೇರಿ ಕೊಡಗು ವಿದ್ಯಾಲಯ ಶಾಲೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಬಿ.ಎ ಆದಿಲ್ಗೆ ತೃತೀಯ ಬಹುಮಾನ ದೊರಕಿದೆ. ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯ ೯ನೇ ತರಗತಿ ವಿದ್ಯಾರ್ಥಿ ಆದಿಲ್, ಶಿಕ್ಷಕಿ ನಿರಾಲಿ ಮಂದಣ್ಣ ಅವರ ಮಾರ್ಗದರ್ಶನದಲ್ಲಿ ‘ಇಂದಿಗೂ ಭಾರತೀಯ ಸೇನೆಯಲ್ಲಿ ಜಾರಿಯಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ ಪಾರಂಪರಿಕ ಹೆಗ್ಗುರುತುಗಳು’ ಎಂಬ ವಿಷಯ ಮಂಡಿಸಿ ತೃತೀಯ ಬಹುಮಾನ ಪಡೆದರು.