ಸೋಮವಾರಪೇಟೆ, ಫೆ. ೨೩: ವಿಶ್ವಕ್ಕೆ ಹಿಂದುತ್ವ ಸಾರಿದ ರಾಷ್ಟç ಭಾರತ ಎಂದು ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪುತ್ತೂರು ರವೀಂದ್ರ ಹೇಳಿದರು.

ಪಟ್ಟಣದ ಬೇಳೂರು ಮಂಡಲದ ವತಿಯಿಂದ ಏರ್ಪಡಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿz ಅವರು, ಹಿಂದುತ್ವದ ಹರಿಕಾರ, ಪ್ರತಿಪಾದಕ ಸ್ವಾಮೀ ವಿವೇಕಾನಂದರು ಅಂದು ಚಿಕಾಗೋ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಮಾತನಾಡಿ ಇಡೀ ವಿಶ್ವವೇ ಭಾರತದತ್ತ ತಿರುಗಿನೋಡುವಂತೆ ಮಾಡಿದರು. ಸನಾತನ ಹಿಂದೂ ಧರ್ಮ ಉಳಿದರೆ ಭಾರತ ಉಳಿಯುತ್ತದೆ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕೆಂದರು. ವಿಶ್ವದ ಇತರೆ ರಾಷ್ಟçಗಳು ವ್ಯವಹಾರಿಕ ದೇಶಗಳಾದರೆ ಭಾರತ ಮಾತೃತ್ವ ಹಾಗೂ ಭ್ರಾತೃತ್ವದ ದೇಶವಾಗಿದೆ, ಬೇರೆ ರಾಷ್ಟçಗಳು ತಮ್ಮ ಬದುಕಿಗಾಗಿ ಪರರನ್ನು ಕೊಲ್ಲುತಿವೆ. ಕೋವಿಡ್ ಸಂದರ್ಭದಲ್ಲಿ ಭಾರತ ಕಂಡುಹಿಡಿದ ಲಸಿಕೆಯನ್ನು ಇತರೆ ರಾಷ್ಟçಗಳಿಗೂ ನೀಡುವ ಮೂಲಕ ಭಾರತ ಮಾತ್ರ ತಮ್ಮೊಡನೆ ಇತರನ್ನು ಬದುಕಿಸುತ್ತಿದೆ ಅದಕ್ಕಾಗಿಯೇ ಹಿಂದುತ್ವ ಉಳಿಯಬೇಕೆಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ತೋಟಂದಾರ್ಯ ಮಠ, ಬಸವಾಪಟ್ಟಣ ಹಾಗೂ ಮುಳ್ಳೂರು ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ, ರಾಷ್ಟçದಲ್ಲಿ ಸನಾತನ ಧರ್ಮ, ಹಿಂದುತ್ವದ ಬಗ್ಗೆ ಕಾಳಜಿ ವಹಿಸಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿರುವ ಏಕೈಕ ಸಂಘಟನೆಯೆAದರೆ ಅದು ರಾಷ್ಟಿçÃಯ ಸ್ವಯಂ ಸೇವಕ ಸಂಘ ಎಂದು ಹೆಮ್ಮೆಯಿಂದ ಹೇಳಬಹುದೆಂದರು, ಆರ್.ಎಸ್.ಎಸ್.ಆರಂಭಗೊAಡು ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಷ್ಟçದೆಲ್ಲೆಡೆ ಹಿಂದೂಸAಗಮ ಕಾರ್ಯಕ್ರಮ ಆಯೋಜಿಸುವ ಮೂಲಕ ಹಿಂದೂಗಳನ್ನು ಒಂದೆಡೆ ಸೇರಿಸುವ ಕಾರ್ಯನಡೆಯುತ್ತಿದೆ ಎಂದರು.

ಈ ದೇಶದ ಸಂಸ್ಕೃತಿ, ಆಚಾರ, ವಿಚಾರ ಉಳಿಯಬೇಕಾದರೆ ಮನೆಯಲ್ಲಿ ಮಹಿಳೆಯರು ಮೊದಲು ಆಚಾರವಂತರಾಗಬೇಕು, ಮಕ್ಕಳನ್ನು ಸುಸಂಸ್ಕೃತರಾಗಿ ಬೆಳೆಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಫಿ ಬೆಳೆಗಾರರಾದ ಗುರುಮಲ್ಲೇಶ ವಹಿಸಿದ್ದರು. ಆಟೋ ಚಾಲಕಿ ಪ್ರಮೀಳಾ, ಹಿಂದೂ ಸಂಗಮ ಆಯೋಜನಾ ಸಮಿತಿ ತಾಲೂಕು ಗೌರವಾಧ್ಯಕ್ಷ ಸೀತಾರಾಮ್, ಅಧ್ಯಕ್ಷ ಕೆ.ಟಿ. ಸನತ್, ಮಂಡಲ ಅಧ್ಯಕ್ಷ ಚಂದ್ರು ಹುಲ್ಲೂರಿಕೊಪ್ಪ ಉಪಸ್ಥಿತರದ್ದರು. ಕಾರ್ಯಕ್ರಮಕ್ಕೂ ಮುನ್ನ ಕುಸುಬೂರು ದೇವಾಲಯದ ಬಳಿಯಿಂದ ಶೋಭಾಯಾತ್ರೆ ನಡೆಯಿತು.