ಕೂಡಿಗೆ, ಫೆ. ೨೨: ಕೂಡಿಗೆ ಕೊಪ್ಪಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನದ ಚುನಾವಣೆ ನಡೆದು ೯ ನಿರ್ದೇಶಕರು ಆಯ್ಕೆಗೊಂಡಿದ್ದಾರೆ.
೯ ನಿರ್ದೇಶಕರ ಸ್ಥಾನಕ್ಕೆ ಚುನಾವಣಾ ಕಣದಲ್ಲಿ ೧೫ ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಮಮತ, ಪವಿತ್ರ, ರತ್ನ, ಜ್ಯೋತಿ, ಕಮಲ, ರತ್ನ, ರೇಣುಕಾ, ಮಂದಾಕಿನಿ, ಹಿಂದುಳಿದ ವರ್ಗ ಬಿ. ಕ್ಷೇತ್ರದಿಂದ ಲತಾ ಆಯ್ಕೆಯಾಗಿದ್ದಾರೆ.
ಹಿಂದುಳಿದ ವರ್ಗ ಬಿ. ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳಿಗೆ ಸಮವಾಗಿ ೨೦ ಮತಗಳು ಬಂದ ಕಾರಣ ಲಾಟರಿ ಮೂಲಕ ಲತಾ ಅವರು ಆಯ್ಕೆಯಾದರು.
ಬಿ.ಸಿ.ಎಂ.ಎ. ಕ್ಷೇತ್ರದಿಂದ ಜಯಶ್ರೀ ಮತ್ತು ಎಸ್ ಟಿ. ಕ್ಷೇತ್ರದಿಂದ ಲಕ್ಷಿö್ಮ ಅವಿರೋಧವಾಗಿ ಆಯ್ಕೆಯಾಗಿದ್ದರು ಎಂದು ಚುನಾವಣಾ ಅಧಿಕಾರಿ ಪ್ರದೀಪ್ ತಿಳಿಸಿದ್ದಾರೆ. ಸಹಾಯಕ ಚುನಾವಣಾ ಅಧಿಕಾರಿಯಾಗಿ ಕಾರ್ಯದರ್ಶಿ ಸುಮಾ ಕಾರ್ಯ ನಿರ್ವಹಿಸಿದರು.