ನಾಪೋಕ್ಲು, ಫೆ. ೨೫: ದುಬೈ ಅನಿವಾಸಿ ಕನ್ನಡಿಗರ ಪ್ರಮುಖ ಸಂಘಟನೆಯಾದ ಕೊಡಗು-ದಕ್ಷಿಣ ಕನ್ನಡ ಗೌಡ ಸಮಾಜ ದುಬೈ, ವತಿಯಿಂದ ಆಯೋಜಿಸಲಾಗಿದ್ದ ‘ಕ್ರಿಕೆಟ್ ಸೀಸನ್-೬’ ಹಾಗೂ ಪ್ರಥಮ ವರ್ಷದ ‘ಥ್ರೋಬಾಲ್ ಸೀಸನ್-೧’ ಕ್ರೀಡಾಕೂಟವು ದುಬೈನಲ್ಲಿ ಇತ್ತೀಚೆಗೆ ಜರುಗಿತು. ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಮೋಹನ್ ಕಡಂಬಳ, ಉಪಾಧ್ಯಕ್ಷ ಸುರೇಶ್ ಕುಂಪಲ ಹಾಗೂ ಸಲಹೆಗಾರರಾದ ಹರೀಶ್ ಕೋಡಿ ಮತ್ತು ಸುನಿಲ್ ಮೊಟ್ಟೆಮನೆ ಅವರು ಉದ್ಘಾಟಿಸಿದರು.
ಜಿದ್ದಾಜಿದ್ದಿನಿಂದ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು ೮ ತಂಡಗಳು ಭಾಗವಹಿಸಿದ್ದು, ‘ಗೌಜಿ ಗಮ್ಮತ್’ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತು ಹಾಗೂ ‘ಕೂರ್ಗ್ ವಾರಿಯರ್ಸ್’ ತಂಡವು ರನ್ನರ್-ಅಪ್ ಪ್ರಶಸ್ತಿ ಪಡೆಯಿತು. ಕ್ರಿಕೆಟ್ ಪಂದ್ಯಾವಳಿಯ ತೀರ್ಪುಗಾರರಾಗಿ ಗಿರೀಶ್, ಸುಧೀರ್ ಮತ್ತು ಮನೋಜ್ ಅವರು ಕಾರ್ಯನಿರ್ವಹಿಸಿದರು. ಮನೋಜ್ ಕುಲಾಲ್ ಅವರು ವೀಕ್ಷಕ ವಿವರಣೆಯನ್ನು ನೀಡಿದರು.
ಇದೇ ಮೊದಲ ಬಾರಿಗೆ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಥ್ರೋಬಾಲ್ ಸೀಸನ್-೧ ಪಂದ್ಯಾವಳಿಯಲ್ಲಿ ೪ ತಂಡಗಳು ಪಾಲ್ಗೊಂಡಿದ್ದು, ‘ದುಬೈ ರಾಯಲ್ಸ್’ ಪ್ರಥಮ ಸ್ಥಾನ ಹಾಗೂ ‘ಟೀಂ ಬಾವಾಸ್’ ದ್ವಿತೀಯ ಸ್ಥಾನ ಗಳಿಸಿತು. ಉತ್ತಮ ಶಿಸ್ತಿನ ತಂಡ ಪ್ರಶಸ್ತಿಯ ಪ್ರಾಯೋಜಕರಾದ ಆನಂದ್ ವಳಾಲ್ ಅವರು ಗೌಡ ಫ್ರೆಂಡ್ಸ್ ಕ್ಲಬ್‌ಗೆ ಪ್ರಶಸ್ತಿಯನ್ನು ನೀಡಿದರು.
ಕ್ರೀಡಾಕೂಟದ ಅಂಗವಾಗಿ ನಡೆದ ಮಹಿಳೆಯರ ಹಗ್ಗಜಗ್ಗಾಟ ಎಲ್ಲರ ಗಮನ ಸೆಳೆಯಿತು. ಮಕ್ಕಳಿಗಾಗಿ ಆಯೋಜಿಸಲಾಗಿದ್ದ ವಿವಿಧ ಮನರಂಜನಾ ಆಟಗಳನ್ನು ಆಯುಶ್ ಕೋಡಿ ಮತ್ತು ಕಾವ್ಯ ಅವಿನಾಶ್ ಅವರು ನಿರ್ವಹಿಸಿದರು.
ಕ್ರೀಡಾ ಸಂಯೋಜಕರಾಗಿ ಪ್ರಶಾಂತ್ ವಿಟ್ಲ, ನಾಗೇಶ್, ಅಕ್ಷತ್ ಮಲ್ಲಿ ಹಾಗೂ ಅನೀಶ್ ಶೆಟ್ಟಿ ಅವರು ಸಹಕರಿಸಿದರು. ಮೋಹನಿಶ್ ಕೊಂಬಾರನ ಅವರು ಡಿಜೆ ಸಂಗೀತದ ಮೂಲಕ ಮೆರುಗು ನೀಡಿದರು. ಈ ಬಾರಿಯ ಕ್ರೀಡಾಕೂಟದ ಆಕರ್ಷಕ ವಿಜೇತ ಟ್ರೋಫಿಗಳನ್ನು ಸಂಘದ ಉಪಾಧ್ಯಕ್ಷರಾದ ಸುರೇಶ್ ಕುಂಪಲ ಅವರು ತಮ್ಮ ತಾಯಿ ದಿವಂಗತ ಕಮಲ ಅವರ ಸ್ಮರಣಾರ್ಥವಾಗಿ ಪ್ರಾಯೋಜಿಸಿದ್ದರು.
ಕಾರ್ಯಕ್ರಮದಲ್ಲ್ಲಿ ಮೀನಾ ಹರೀಶ್ ಕೋಡಿ, ಸುಪ್ರೀತಾ ಸುರೇಶ್, ರಕ್ಷಿತಾ ದೇರಾಜೆ ಹಾಗೂ ಮಾನಸ ದಿಲೀಪ್ ಉಳುವಾರು ಪ್ರಾರ್ಥನೆ ನೆರವೇರಿಸಿದರು. ಯತೀಶ್ ಗೌಡ ಅವರು ಸ್ವಾಗತ ಭಾಷಣ ಮಾಡಿದರು. ಗಣೇಶ್ ಅಚ್ಚಂಡಿರ, ಆನಂದ್ ಪಟ್ಟೆ ವಳಾಲ್, ದಿಲೀಪ್ ಉಳುವಾರು ಮತ್ತು ಸುನಿಲ್ ಕರ್ಣಾಯನ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಿರಣ್ ಗೌಡ ವಹಿಸಿದ್ದರು. ವಿಜೇತರಿಗೆ ಪದಾಧಿಕಾರಿಗಳು ಬಹುಮಾನ ವಿತರಿಸಿದರು. ತೇಜ್ ಕೊರಂಬಡ್ಕ ಅವರು ಸಂಘದ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ದಿಲೀಪ್ ಉಳುವಾರು ವಂದನಾರ್ಪಣೆ ಮಾಡಿದರು.
ನಿತಿನ್ ಧೋರ್ತೋಡಿ ಮತ್ತು ಶ್ರಾವ್ಯ ಗೌಡ ಕಾರ್ಯಕ್ರಮ ನಿರೂಪಿಸಿದರು. ರೋಶನ್ ಕಂಪ ಮತ್ತು ಶರತ್ ಚೊಕ್ಕಾಡಿ ಅವರ ನೇತೃತ್ವದಲ್ಲಿ ಕ್ರೀಡಾಕೂಟವು ಯಶಸ್ವಿಯಾಗಿ ನೆರವೇರಿತು.
ಸುಮಾರು ೪೦೦ಕ್ಕೂ ಹೆಚ್ಚು ಸಮಾಜ ಬಾಂಧವರು ಕ್ರೀಡಾ ಸಂಭ್ರಮದಲ್ಲಿ ಪಾಲ್ಗೊಂಡರು.