ಮಡಿಕೇರಿ, ಫೆ. ೨೫: ಮಡಿಕೇರಿ ನಗರದ ರಸ್ತೆಗಳೆಲ್ಲವೂ ಗುಂಡಿ ಬಿದ್ದು, ತೀರಾ ಹಾಳಾಗಿದ್ದು, ಇದನ್ನು ಸರಿಪಡಿಸುವಲ್ಲಿ ನಗರಸಭೆ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ನಗರಸಭೆ ಎದುರು ಪ್ರತಿಭಟನೆ ನಡೆಯಿತು.

ರಸ್ತೆಗಳ ಗುಂಡಿ ಎಂದು ಮುಚ್ಚುವಿರಿ, ಗುಂಡಿ ಬಿದ್ದ ರಸ್ತೆಗಳಿಗೆ ಮುಕ್ತಿಕೊಡಿ, ಮಳೆಗಾಲ ಕಳೆದು ಬೇಸಿಗೆ ಆರಂಭವಾಯಿತು, ದಸರಾ ಉತ್ಸವ ಕೂಡ ಮುಗಿದುಹೋಯಿತು. ಆದರೂ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಕಂಕಣ ಕೂಡಿ ಬಂದಿಲ್ಲ; ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ದುರವಸ್ಥೆಯನ್ನು ಆದಷ್ಟು ಶೀಘ್ರ ಸರಿಪಡಿಸಬೇಕು. ರಸ್ತೆ ಕಾಮಗಾರಿ ವಿಚಾರದಲ್ಲಿ ವಿಳಂಬ ಮಾಡುವ ಗುತ್ತಿಗೆದಾರರನ್ನು ಸತಾಯಿಸುವ ಟೆಂಡರ್‌ದಾರರನ್ನು ಶಾಶ್ವತವಾಗಿ ಕಪ್ಪುಪಟ್ಟಿಗೆ ಸೇರಿಸುವಂತಾಗಬೇಕೆAದು ಆಗ್ರಹಿಸಿದರು.

ಪ್ರತಿಭಟನೆ ಕುರಿತು ಮಾತನಾಡಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ, ನಗರಸಭಾ ಸದಸ್ಯ ಅಮೀನ್ ಮೊಯ್ಸಿನ್ ಮಡಿಕೇರಿಯ ರಸ್ತೆಗಳು ಗುಂಡಿಮಯವಾಗಿದೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ರಸ್ತೆಗಳಲ್ಲಿ ಯಾರಿಗೂ ನಡೆದಾಡಲು ಸಾಧ್ಯವಾಗದ ರೀತಿಯಲ್ಲಿ ರಸ್ತೆಗಳು ಹಾಳಾಗಿವೆ. ಈ ಬಗ್ಗೆ ಗಮನ ಹರಿಸಬೇಕಾದ ನಗರಸಭೆ ಆಡಳಿತ ನಿರ್ಲಕ್ಷö್ಯ ವಹಿಸಿದೆ ಎಂದು ದೂರಿದರು.

ಮಡಿಕೇರಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕುಡಿಯುವ ನೀರಿನ ಅಮೃತ್ ೨ ಯೋಜನೆ ಹೆಸರಿನಲ್ಲಿ ರಸ್ತೆಗಳನ್ನು ಅಗೆದುಹಾಕಲಾಗಿದ್ದು, ಅದನ್ನು ವೈಜ್ಞಾನಿಕವಾಗಿ ಸರಿಪಡಿಸುವ ಕಾರ್ಯ ನಡೆಯುತ್ತಿಲ್ಲ. ನಗರೋತ್ಥಾನದ ಕಾಮಗಾರಿಗಳು ಕೂಡ ಪೂರ್ಣಗೊಂಡಿಲ್ಲ. ಕಾವೇರಿ ಕಲಾಕ್ಷೇತ್ರದ ನೂತನ ಕಾಮಗಾರಿಗೆ ೯.೫೦ ಕೋಟಿ ರೂ. ಕ್ರಿಯಾಯೋಜನೆ ಮಾಡಲಾಗಿದ್ದರೂ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಇನ್ನೆರಡು ತಿಂಗಳಲ್ಲಿ ಮತ್ತೆ ಮಳೆಗಾಲ ಆರಂಭವಾಗಲಿದ್ದು, ನಂತರ ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆಗಳನ್ನೂ ಕೂಡ ಸರಿಯಾಗಿ ಕರೆಯುತ್ತಿಲ್ಲ. ಸ್ಥಾಯಿ ಸಮಿತಿ ಸಭೆಗಳು ಕೂಡ ನಡೆಯುತ್ತಿಲ್ಲ. ಅಕ್ರಮ ಕಟ್ಟಡಗಳ ತೆರವು ಕಾರ್ಯ ಕೂಡ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಭಿತ್ತಿಪತ್ರ ಅಂಟಿಸಲು ತಡೆ

ಪ್ರತಿಭಟನೆಯ ಉದ್ದೇಶದ ಕುರಿತು ಮಾತನಾಡಿದ ಅಮೀನ್ ಮೊಯ್ಸಿನ್, ನಗರಸಭೆ ಅಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಕಮಿಷನರ್ ಕೊಠಡಿಗಳು ನಗರದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿಷ್ಕಿçÃಯವಾಗಿವೆ. ಈ ಹಿನ್ನೆಲೆಯಲ್ಲಿ ಆ ಕೊಠಡಿಗಳು ನಿಷ್ಕಿçÃಯವಾಗಿವೆ ಎಂದು ಕೊಠಡಿಗಳಿಗೆ ಭಿತ್ತಿಪತ್ರ ಅಂಟಿಸುತ್ತೇವೆ ಎಂದರು. ಬಳಿಕ ಪ್ರತಿಭಟನಾಕಾರರೆಲ್ಲರೂ ಭಿತ್ತಿಪತ್ರ ಅಂಟಿಸಲೆAದು ನಗರಸಭೆಯ ಒಳನುಗ್ಗಲು ಮುಂದಾದಾಗ ನಗರ ವೃತ್ತ ನಿರೀಕ್ಷಕರ ರಾಜು ಅವರ ನೇತೃತ್ವದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರ ತಂಡ ಪ್ರತಿಭಟನಾಕಾರರನ್ನು ತಡೆಯಿತು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುವ ಹಿನ್ನೆಲೆಯಲ್ಲಿ ಭಿತ್ತಿಪತ್ರವನ್ನು ಅಂಟಿಸಲು ಅವಕಾಶ ನೀಡುವುದಿಲ್ಲ ಎಂದು ರಾಜು ಹೇಳಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.

ಅಧ್ಯಕ್ಷರ ಆಗಮನ

ಭಿತ್ತಿಪತ್ರ ಅಂಟಿಸಲು ಪೊಲೀಸರು ತಡೆಯೊಡ್ಡಿದ ಬಳಿಕ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರುಗಳ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಲಾರಂಭಿಸಿದರು. ಈ ವೇಳೆ ಪ್ರತಿಭಟನಾಕಾರರ ಬಳಿಗೆ ನಗರಸಭಾ ಅಧ್ಯಕ್ಷೆ ಕಲಾವತಿ ಆಗಮಿಸಿದರು. ಉಪಾಧ್ಯಕ್ಷ ಮಹೇಶ್ ಜೈನಿಯೂ ಬಂದರು. ಈ ವೇಳೆ ಅಮೀನ್ ಮೊಯ್ಸಿನ್, ನಗರಸಭೆಯು ರಸ್ತೆ ದುರವಸ್ಥೆ ಸರಿಪಡಿಸದ ಬಗ್ಗೆ ಸಭೆಗಳನ್ನು ಕÀರೆಯದ ಬಗ್ಗೆ ನಗರೋತ್ಥಾನ ಕಾಮಗಾರಿಗಳ ಕುರಿತು ಅಮೃತ್ ೨ ಯೋಜನೆಯಿಂದಾಗುತ್ತಿರುವ ತೊಂದರೆಗಳ ಬಗ್ಗೆ ಕಾವೇರಿ ಕಲಾಕ್ಷೇತ್ರ ಕಾಮಗಾರಿ ಆಗದ ಬಗ್ಗೆ ಹಾಗೂ ಮತ್ತಿತರ ಹಲವು ಸಮಸ್ಯೆಗಳ ಬಗ್ಗೆ ಅಧ್ಯಕ್ಷರೆದುರು ಪ್ರಸ್ತಾಪಿಸಿ ಸಮಜಾಯಿಸಿಕೆ ಬಯಸಿದರು.

ಈ ವೇಳೆ ಮಾತನಾಡಿದ ಉಪಾಧ್ಯಕ್ಷ ಮಹೇಶ್ ಜೈನಿ, ಅಮೃತ್ ೨ ಕಾಮಗಾರಿ ಬಗ್ಗೆ ತಾನು ಹಾಗೂ ಅಧ್ಯಕ್ಷರು ಪರಿಶೀಲನೆ ನಡೆಸುತ್ತಿದ್ದು, ಅದರಿಂದ ತೊಂದರೆ ಆಗದಂತೆ, ಅಗೆಯಲಾದ ಗುಂಡಿಗಳನ್ನು ಮುಚ್ಚಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು. ಕಾವೇರಿ ಕಲಾಕ್ಷೇತ್ರದ ಕಾಮಗಾರಿ ಸಂಬAಧ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನೊಂದು ವಾರದಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು. ಅಮೃತ್ ಯೋಜನೆ, ನಗರೋತ್ಥಾನ ಕಾಮಗಾರಿ ಹಾಗೂ ನಿವೇಶನ ರಹಿತರಿಗೆ ನಿವೇಶನ ಈ ವಿಚಾರಗಳ ಕುರಿತು ಚರ್ಚಿಸಲು ಹತ್ತು ದಿನಗಳ ಒಳಗೆ ಸಭೆ ಕರೆಯುವಂತೆ ಅಮೀನ್ ಮೊಯ್ಸಿನ್ ಆಗ್ರಹಿಸಿದರು. ಆದಷ್ಟು ಶೀಘ್ರ ಸಭೆ ಕರೆಯಲಾಗುವುದು ಎಂದು ಅಧ್ಯಕ್ಷರು, ಉಪಾಧ್ಯಕ್ಷರು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರುಗಳಾದ ಮನ್ಸೂರ್, ಮೇರಿ ವೇಗಸ್, ಬಶೀರ್ ಅಹ್ಮದ್, ನೀಮಾ ಅರ್ಷದ್, ಅಬ್ದುಲ್ ಅಡ್ಕಾರ್, ಮೈಕಲ್ ವೇಗಸ್, ಪಕ್ಷದ ನಗರಾಧ್ಯಕ್ಷ ಮಹಮ್ಮದ್ ಅಲಿ ಮತ್ತಿತರರು ಪಾಲ್ಗೊಂಡಿದ್ದರು.