ಮಡಿಕೇರಿ, ಫೆ.೨೫: ಕೇಂದ್ರ ಸರ್ಕಾರದ ಸವಲತ್ತುಗಳನ್ನು ಪಡೆಯಲು ಈಗಾಗಲೇ ರೈತರು ಇ-ಕೆವೈಸಿಯನ್ನು ಮಾಡಿಸಿ ‘ಫ್ರೂಟ್ಸ್’ ಐಡಿ ಮುಖಾಂತರ ಸವಲತ್ತುಗಳನ್ನು ಪಡೆಯುತ್ತಿದ್ದಾರೆ, ಆದರೆ ಈ ರೈತ ಬಾಂಧವರಿಗೆ ಕೇಂದ್ರ ಸರ್ಕಾರವು ಏಕೀಕೃತ ಫ್ರೂಟ್ಸ್ ಐಡಿಗಳನ್ನು ಸೃಜನೆ ಮಾಡುತ್ತಿದ್ದು, ಸದರಿ ಫ್ರೂಟ್ಸ್ ಐಡಿಗಳನ್ನು ಕೇಂದ್ರ ಸರ್ಕಾರದ ಆ್ಯಪ್‌ನೊಂದಿಗೆ ಹೊಂದಾಣಿಕೆ ಮಾಡಲಾಗುವುದು.

ಆದ್ದರಿಂದ ರೈತರು ತಮ್ಮ ಹೆಸರಿಗಿರುವ ಎಲ್ಲಾ ಸರ್ವೆ ನಂಬರ್‌ವಾರು ವಿಸ್ತೀರ್ಣದ ಮಾಹಿತಿಯನ್ನು ಫ್ರೂಟ್ಸ್ ಐಡಿಯಲ್ಲಿ ಸೇರಿಸಬೇಕು. ಫ್ರೂಟ್ಸ್ ಐಡಿ ಸೃಜಿಸುವ ಸಂಬAಧ ರೈತರು ಡಿಜಿಟಲ್ ಕನ್‌ಸೆಂಟ್ ನೀಡಬೇಕಾಗಿದ್ದು ತಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನು ರೈತ ಸಂಪರ್ಕ ಕೇಂದ್ರ, ತೋಟಕಾರಿಕೆ, ಪಶು ಸಂಗೋಪನ ಇಲಾಖೆ ಹಾಗೂ ಗ್ರಾಮ ಒನ್ ಕೇಂದ್ರದ ಕಚೇರಿಗಳಿಗೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬಹುದಾಗಿದೆ.

ಫ್ರೂಟ್ಸ್ ಐಡಿ ಇಲ್ಲದ ರೈತರು ನಿಮ್ಮ ಹೆಸರಿಗೆ ಇರುವ ಎಲ್ಲಾ ಜಮೀನಿನ ಪಹಣಿಯೊಂದಿಗೆ ಬ್ಯಾಂಕ್ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಸಂಖ್ಯೆ ಮತ್ತು ಆಧಾರ್ ಲಿಂಕ್ ಇರುವ ಮೊಬೈಲ್‌ನೊಂದಿಗೆ ಈ ಕಚೇರಿಗಳಿಗೆ ಭೇಟಿ ಕೊಟ್ಟು ನೋಂದಾಯಿಸಿಕೊಳ್ಳಬೇಕಾಗಿ ತಿಳಿಸಲಾಗಿದೆ.ಈಗಾಗಲೇ ಫ್ರೂಟ್ಸ್ ಐಡಿ ಇರುವ ರೈತರು ನಿಮ್ಮ ಹೆಸರಿಗಿರುವ ಬಾಕಿ ಯಾವುದಾದರು ಜಮೀನಿನ ಸರ್ವೆ ನಂಬರ್ ಮಾಹಿತಿಯನ್ನು ಫ್ರೂಟ್ಸ್ ಐಡಿಯಲ್ಲಿ ಸೇರಿಸಿಕೊಳ್ಳಲು ಅವಕಾಶವಿರುತ್ತದೆ.

ಕೇಂದ್ರ ಸರ್ಕಾರದ ಯಾವುದೇ ಸವಲತ್ತುಗಳನ್ನು ಪಡೆಯಲು ಡಿಜಿಟಲ್ ಕನ್ಸೆಂಟ್ ಕಡ್ಡಾಯವಾಗಿರುತ್ತದೆ, ಆದ್ದರಿಂದ ಜಿಲ್ಲೆಯ ರೈತರು ಸಂಬAಧಿಸಿದ ಕಚೇರಿಗಳಿಗೆ ತಾ. ೨೭ ರೊಳಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳುವAತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.