ಸಿದ್ದಾಪುರ, ಫೆ. ೨೫: ಬೈಕ್ ಸವಾರರ ಮೇಲೆ ಒಂಟಿ ಸಲಗ ದಾಳೆ ನಡೆಸಲು ಯತ್ನಿಸಿದ ಘಟನೆ ಬಾಡಗ-ಬಾಣಂಗಾಲದಲ್ಲಿ ನಡೆದಿದೆ.

ಖಾಸಗಿ ಸಂಸ್ಥೆಯ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ಮಣಿ ಹಾಗೂ ಸುಮಂತ್ ಎಂಬವರು ಮಂಗಳವಾರ ರಾತ್ರಿ ಕರ್ತವ್ಯ ಮುಗಿಸಿ ತಮ್ಮ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಚೌಡಿ ಕಾಡು ಕಾಫಿ ತೋಟದೊಳಗಿಂದ ಏಕಾಏಕಿ ಒಂಟಿ ಸಲಗ ಒಂದು ಬೈಕ್ ಸವಾರರ ಮೇಲೆ ದಾಳಿಗೆ ಮುಂದಾಗಿದೆ. ಈ ಸಂದರ್ಭ ಬೈಕನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಈ ಸಂದರ್ಭ ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಕಾಡಾನೆ ದಾಳಿಗೆ ಸಿಲುಕಿ ಬೈಕ್ ಜಖಂಗೊAಡಿದೆ.

ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಶಶಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.