ಚೆಟ್ಟಳ್ಳಿ, ಫೆ. ೨೬: ಇತಿಹಾಸ ಪ್ರಸಿದ್ಧವಾದ ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ ದೇವಾಲಯದಲ್ಲಿ ವಾರ್ಷಿಕ ಉತ್ಸವ ತಾ. ೨೭ ರಿಂದ (ಇಂದಿನಿAದ) ಪ್ರಾರಂಭಗೊAಡು ಮಾರ್ಚ್ ೧ ರಂದು ದೊಡ್ಡಹಬ್ಬ ನಡೆಯಲಿದೆ ಎಂದು ದೇವಾಲಯ ತಕ್ಕಮುಖ್ಯಸ್ಥರಾದ ಕೊಂಗೇಟಿರ ಹರೀಶ್ ಅಪ್ಪಣ್ಣ ಹಾಗೂ ಚೇರಳತಮ್ಮಂಡ ಆನಂದ ತಿಳಿಸಿದ್ದಾರೆ.ತಾ. ೨೪ ರಂದು ಹಬ್ಬದಕಟ್ಟು ಬೀಳಲಾಯಿತು. ತಾ. ೨೭ ರಂದು ಪಟ್ಟಣಿ ನಮ್ಮೆ, ತಾ. ೨೮ ರಂದು ಅಯ್ಯಪ್ಪ ಭನ, ಮಾರ್ಚ್ ೧ ರಂದು ದೊಡ್ಡ ಹಬ್ಬವಾಗಿದ್ದು ಅಂದು ವಿಶೇಷವಾದ ಕೊಂಬಾಟ್, ದೇವರಿಗೆ ಹರಕೆ ಒಪ್ಪಿಸಿವುದು, ಅನ್ನಸಂತರ್ಪಣೆ ನಡೆಯಲಿದೆ.