ಮಡಿಕೇರಿ, ಫೆ. ೨೬: ಕದನೂರು ಶ್ರೀ ಭಗವತಿ ದೇವಿ ವಾರ್ಷಿಕ ಉತ್ಸವ ಮಾರ್ಚ್ ೧ ರಿಂದ ೬ರ ತನಕ ನಡೆಯಲಿದೆ.

ಮಾ. ೧ ರಂದು ರಾತ್ರಿ ೭.೩೦ಕ್ಕೆ ಅಂದಿ ಬೊಳಕ್, ದೇವರು ಹೊರ ಬರುವುದು, ತಾ. ೨ ರಂದು ಸಂಜೆ ೬ ಗಂಟೆಗೆ ದೇವರು ಬನಕ್ಕೆ ತೆರಳುವುದು, ೧೦ ಗಂಟೆಗೆ ಅಯ್ಯಪ್ಪ ದೇವರ ಕೋಲ, ತಾ. ೩ ರಂದು ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ಸಂಜೆ ೪.೩೦ಕ್ಕೆ ಎತ್ತು ಪೋರಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ೫ಕ್ಕೆ ದೇವರು ಹೊರಬರುವುದು ಹಾಗೂ ಜಳಕಕ್ಕೆ ತೆರಳುವುದು. ತಾ. ೪ ರಂದು ಬೆಳಿಗ್ಗೆ ೫ಕ್ಕೆ ಭಗವತಿ ದೇವಿಯ ಉದ್ದಮುಡಿ ಕೋಲ, ತಾ. ೬ ರಂದು ಮಧ್ಯಾಹ್ನ ೧೨ಕ್ಕೆ ಮಹಾಪೂಜೆ ನಡೆಯಲಿದ್ದು, ಹಬ್ಬದ ಎಲ್ಲಾ ದಿನ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.