ಕೂಡಿಗೆ, ಫೆ. ೨೬: ಹಾರಂಗಿ ಉದ್ಯಾನವನ ನಿರ್ವಹಣೆ ಮಾಡುವ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರು ವೇತನ ನೀಡಿಲ್ಲ ಎಂದು ಆರೋಪಿಸಿ ಕೆಲಸ ಸ್ಥಗಿತಗೊಳಿಸಿ ಹಾರಂಗಿ ಕಾರ್ಯಪಾಲಕ ಅಭಿಯಂತರರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
೨೦ ಸಿಬ್ಬಂದಿ ಕೆಲಸವನ್ನು ಸ್ಥಗಿತಗೊಳಿಸಿ ವೇತನ ಪಾವತಿಗೆ ಒತ್ತಾಯಿಸಿದರು.
ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ಮಾತನಾಡಿ, ಈಗಾಗಲೇ ಟೆಂಡರ್‌ದಾರರ ಗಮನಕ್ಕೆ ವಿಷಯವನ್ನು ತರಲಾಗಿದೆ. ನಿಗಮದಿಂದ ಹಣ ಬಿಡುಗಡೆಗೊಂಡ ತಕ್ಷಣ ಸಂದಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ್ ನಾಯಕ್, ಸದಸ್ಯ ಮಣಿ ಪ್ರತಿಭಟನಾಕಾರರಿಗೆ ಬೆಂಬಲ ನೀಡಿದರು. ಸಿಬ್ಬಂದಿಗಳಾದ ಅನಂತ, ಪೂರ್ಣೇಶ್, ಹರೀಶ್, ರಾಣಿ, ಅಂಜಲಿ, ವೆಂಕಮ್ಮ, ಸೇರಿದಂತೆ ಇನ್ನಿತರರು ಇದ್ದರು.