ಕಣಿವೆ, ಫೆ. ೨೭: ಈ ಬಾರಿ ಬೇಸಿಗೆಯ ಆರಂಭಕ್ಕೂ ಮುನ್ನವೇ ಸೂರ್ಯನ ಪ್ರತಾಪ ಹೆಚ್ಚಾಗುತ್ತಿದ್ದು, ಭೂಮಿಯ ಶೀತಾಂಶವನ್ನು ದಹಿಸುತ್ತಿದೆ. ಇದರಿಂದಾಗಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿಯುತ್ತಿದೆ.

ಜಾಗತಿಕ ತಾಪಮಾನ ಈ ಬಾರಿ ಗರಿಷ್ಠ ೪೫ ಡಿಗ್ರಿಗಿಂತಲೂ ಹೆಚ್ಚಾಗಲಿರುವ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ರಾಜ್ಯ ಹವಾಮಾನ ಇಲಾಖೆ ನೀಡುತ್ತಿರುವ ನಿರ್ದೇಶನಗಳು ಪೇಟೆ, ಪಟ್ಟಣ ನಗರವಾಸಿಗಳ ಜನರಲ್ಲಿ ಆತಂಕ ಉಂಟುಮಾಡುತ್ತಿದೆ.

ಮಳೆಗಾಲ ಆರಂಭಕ್ಕೆ ಇನ್ನೂ ನಾಲ್ಕೆöÊದು ತಿಂಗಳು ಇರುವಾಗ ಈಗಲೇ ನಿರ್ಮಾಣವಾಗಿರುವ ಇಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಿದೆ. - ಕೆ.ಎಸ್. ಮೂರ್ತಿ