ಮಡಿಕೇರಿ, ಫೆ. ೨೭: ಬಾಡಗರಕೇರಿ ಗ್ರಾಮದಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವ ನಿನ್ನೆ ಆರಿದ್ರ ನಕ್ಷತ್ರದಲ್ಲಿ ಕೊಡಿಮರ ನಿಲ್ಲಿಸುವ ಮೂಲಕ ಆರಂಭಗೊAಡಿದ್ದು, ಮಾರ್ಚ್ ೮ರ ತನಕ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ.

ನಿನ್ನೆ ಬೆಳಗ್ಗಿನ ಜಾವ ತಕ್ಕಮುಖ್ಯಸ್ಥರು, ಆಡಳಿತ ಮಂಡಳಿ, ಊರಿನವರು ಮತ್ತು ಊರಿನ ಮಹಿಳೆಯರು ೧೨ ತಳಿಯತಕ್ಕಿ ಬೊಳಕ್, ದುಡಿಕೊಟ್ಟ್ ಪಾಟ್ ಸಹಿತ ಹಬ್ಬಕ್ಕೆ ಆರಂಭಿಕ ಚಾಲನೆ ದೊರೆಯಿತು. ಬಳಿಕ ಊರಿನ ಪರವಾಗಿ ಶತರುದ್ರಾಭಿಷೇಕದೊಂದಿಗೆ ರಾತ್ರಿ ೮ ಗಂಟೆಗೆ ಆರಿದ್ರ ನಕ್ಷತ್ರದಲ್ಲಿ ಕೊಡಿಮರ ನಿಲ್ಲಿಸುವ ಮೂಲಕ ಹಬ್ಬದ ಕಟ್ಟು ಸಂಪ್ರದಾಯ ಆರಂಭಗೊAಡಿತು. ತಕ್ಕಮುಖ್ಯಸ್ಥರು, ಆಡಳಿತ ಮಂಡಳಿ ಪ್ರಮುಖರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.