ಮಡಿಕೇರಿ, ಮಾ. ೧: ಭಾರತೀಯ ವಾಯುಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಕೆ.ಆರ್ ಪುಷ್ಯರಾಜ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕಳೆದ ೧೩ ವರ್ಷಗಳಿಂದ ಭಾರತೀಯ ಸೇನೆಯ ಏವಿಯೇಷನ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಗೋಣಿಕೊಪ್ಪ ಸಮೀಪದ ಅತ್ತೂರು ಮೂಲದ ನಿವಾಸಿ, ಪುಷ್ಯರಾಜ್ ಪ್ರಸ್ತುತ ಉತ್ತರಪ್ರದೇಶದ ಝಾನ್ಸಿ ರೆಜಿಮೆಂಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಏವಿಯೇಷನ್ ವಿಭಾಗದಲ್ಲಿ ಉತ್ತಮ ಸೇವೆಯನ್ನು ಗುರುತಿಸಿ, ಪ್ರೊಫೀಸನ್ಸಿ ಎಕ್ಸೆಲೆನ್ಸ್ ಪ್ರಶಸ್ತಿ ಪದಕ ನೀಡಿ ಗೌರವಿಸಲಾಗಿದೆ.

ಇವರು ಅತ್ತೂರು ಮುತ್ತಪ್ಪ ಲೇಔಟ್ ನಿವಾಸಿ ಕೆ.ಡಿ. ರಾಜೇಂದ್ರ ಹಾಗೂ ಪುಷ್ಪಾ ದಂಪತಿ ಪುತ್ರ.