ಐಗೂರು, ಮಾ. ೧: ಮರ ಬಿದ್ದು ಮನೆಗೆ ಹಾನಿ ಸಂಭವಿಸಿದ ಘಟನೆ ಗರಗಂದೂರು ಬಿ ಗ್ರಾಮದಲ್ಲಿ ನಡೆದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾ ಗಿದ್ದಾರೆ.
ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರ ಗಂದೂರು ಬಿ ಗ್ರಾಮದ ಅರುಣ್ ಕುಮಾರ್ ಎಂಬವರ ಮನೆಯ ಮೇಲೆ ಭಾರಿ ಗಾತ್ರದ ತೆಂಗಿನ ಮರ ಬಿದ್ದು ಮನೆಗೆ ಹಾನಿ ಸಂಭವಿಸಿ ನಷ್ಟ ಉಂಟಾಗಿದೆ.
ಸ್ಥಳಕ್ಕೆ ಪಿಡಿಓ ರವಿ ನಾಯರ್, ಲೆಕ್ಕಾಧಿಕಾರಿ ದೀಪಿಕಾ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಲೀಂ ಹೊಸತೋಟ ಭೇಟಿ ನೀಡಿದರು.