ಕೂಡಿಗೆ, ಮಾ. ೨: ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕುಶಾಲನಗರ ಪಶುವೈದ್ಯ ಆಸ್ಪತ್ರೆ, ಶಿರಂಗಾಲ ಹಾಲು ಉತ್ಪಾದಕರ ಸಹಕಾರ ಸಂಘ, ಶಿರಂಗಾಲ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಹಾಲು ಕರೆಯುವ ಸ್ಪರ್ಧೆಯನ್ನು ಶಿರಂಗಾಲ ಸಂತೆಮಾಳದ ಮೈದಾನದಲ್ಲಿ ಏರ್ಪಡಿಸಲಾಗಿತ್ತು.
ಜಿಲ್ಲಾ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಲಿಂಗರಾಜ ದೊಡ್ಡಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರು ಜಾನುವಾರುಗಳ ಆರೋಗ್ಯದ ಮೇಲೆ ನಿಗಾವಿಡಬೇಕು. ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಸದುಪ ಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಕುಶಾಲನಗರ ಪಶುವೈದ್ಯ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸಂಜೀವ್ ಆರ್. ಸಿಂಧೆ ಮಾತನಾಡಿ, ರೈತರ ಬದುಕಿಗೆ ಪೂರಕವಾದ ಹೈನುಗಾರಿಕೆ ಗ್ರಾಮಾಂತರ ಪ್ರದೇಶದ ಜನರ ಬದುಕಿನ ಆಶಾಕಿರಣವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ. ಮೋಹನ್, ಪ್ರಕಾಶ್, ಗಂಗಾಧರ್ ಕುಮಾರ್ ಸ್ವಾಮಿ, ಹೇಮ, ಚಂದ್ರಿಕಾ, ಸಂಘದ ಕಾರ್ಯದರ್ಶಿ ಅಭಿಲಾಷ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಹಾಲು ಕರೆಯುವ ಸ್ಪರ್ಧೆಯಲ್ಲಿ ಶಿರಂಗಾಲ ನಾಗರಾಜ್ ಪ್ರಥಮ, ಕುಮಾರಸ್ವಾಮಿ ದ್ವಿತೀಯ, ಚಂದ್ರಿಕಾ ತೃತೀಯ, ಜೆರ್ಸಿ ಹಸುಗಳ ವಿಭಾಗದಲ್ಲಿ ಪ್ರಮೋದ್ ಪ್ರಥಮ, ಮಂಜುನಾಥ್ ದ್ವಿತೀಯ, ಲೀಲಾವತಿ ತೃತೀಯ, ಹಳ್ಳಿಕಾರ್ ವಿಭಾಗದಲ್ಲಿ ಶಿರಂಗಾಲದ ಎಂ.ಆರ್. ಮಂಜುನಾಥ್, ಮೂಡಲುಕೊಪ್ಪಲು ನಾಗರಾಜ್ ವಿಜೇತರಾದರು.