ಚೆಟ್ಟಳ್ಳಿ, ಮಾ. ೨: ಇತಿಹಾಸ ಪ್ರಸಿದ್ಧ ಚೆಟ್ಟಳ್ಳಿಯ ಚೇರಳ ಶ್ರೀ ಭಗವತಿ ದೇವಾಲಯದ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಉತ್ಸವದ ಆಕರ್ಷಣೆಯಾಗಿ ೧೮ ಬಗೆಯ ಸಂಪ್ರದಾಯಬದ್ಧ ಕೊಂಬಾಟ್ ನೃತ್ಯ ನೆರವೇರಿತು. ದೇವರ ಬೊಳಕ್ ಮರವನ್ನು ದೇವಾಲಯದ ಮುಂದೆ ಸ್ಥಾಪಿಸಿ ಹಬ್ಬಕಟ್ಟು ಹಾಕಲಾಯಿತು. ಫೆ. ೨೭ ರಂದು ಪಟ್ಟಣಿ ಹಬ್ಬ, ೨೮ ರಂದು ಅಯ್ಯಪ್ಪ ಬನಪೂಜೆ, ತಾ. ೧ ರಂದು ದೊಡ್ಡ ಹಬ್ಬ ವಿಜೃಂಭಣೆಯಿAದ ನೆರವೇರಿತು. ದೇವಾಲಯದಲ್ಲಿ ವಿಶೇಷ ಪೂಜೆ ನಡೆದವು. ಅಪರಾಹ್ನ ಕೊಂಗೇಟಿರ ಐನ್‌ಮನೆಯಿಂದ ತಕ್ಕರಾದ ಕೊಂಗೇಟಿರ ಅಪ್ಪಣ್ಣನವರನ್ನು ಒಡ್ಡೋಲಗ ದುಡಿಕೊಟ್ಟ್ ಸಹಿತ ದೇವಾಲಯಕ್ಕೆ ಕರೆತರಲಾಯಿತು. ನಂತರ ದೇವರ ಭಂಡಾರವನ್ನು ಮೆರವಣಿಗೆಯಲ್ಲಿ ದೇವಾಲಯಕ್ಕೆ ತಂದು ನಂತರ ೧೮ ಬಗೆಯ ಕೊಂಬಾಟ್ ನೃತ್ಯ ಪ್ರದರ್ಶನ ನಡೆಯಿತು.