ಶನಿವಾರಸಂತೆ, ಮಾ. ೨: ಸಮೀಪದ ಕೊಡ್ಲಿಪೇಟೆಯ ಕಲ್ಲಳ್ಳಿಮಠ, ಶ್ರೀವೀರಶೈವ ಸಮಾಜದ ಸಹಯೋಗದಲ್ಲಿ ಮಠಾಧೀಶ ರುದ್ರಮುನಿ ಮಹಾ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಪುರೋಹಿತ ಬಳಗದವರಿಂದ ಶ್ರೀವೀರಭದ್ರ ಮಹಾ ಸ್ವಾಮಿಯವರ ೭೧ನೇ, ಶ್ರೀ ಸಂಗಮೇಶ್ವರ ಮಹಾ ಸ್ವಾಮಿಯ ೩೫ನೇ ಪುಣ್ಯಸ್ಮರಣೆ ಹಾಗೂ ಶ್ರೀಚೌಡೇಶ್ವರಿ ತಾಯಿಯ ೧೨೨ನೇ ಮಹಾಪೂಜೆ ತಾ. ೫, ೬ ರಂದು ಮಠದ ಆವರಣದಲ್ಲಿ ನಡೆಯಲಿದೆ.ತಾ. ೫ ರಂದು ಬೆಳಗ್ಗಿನ ಜಾವ ಶ್ರೀವೀರಭದ್ರ ಮಹಾ ಸ್ವಾಮಿ ಹಾಗೂ ಶ್ರೀಸಂಗಮೇಶ್ವರ ಮಹಾ ಸ್ವಾಮಿಯ ಗದ್ದುಗೆಗಳ ಶಿವಲಿಂಗಕ್ಕೆ ರುದ್ರಾಭಿಷೇಕ, ಲಿಂಗ ದೀಕ್ಷೆ (ಶಿವದೀಕ್ಷೆ) ಹಾಗೂ ಮಹಾಪೂಜೆ ನಡೆಯಲಿದೆ. ತಾ. ೬ ರಂದು ಬೆಳಿಗ್ಗೆ ೮ ಗಂಟೆಗೆ ಶ್ರೀತಾಯಿ ಚೌಡೇಶ್ವರಿ ದೇವಿಗೆ ಶ್ರೀರುದ್ರಾಭಿಷೇಕ, ಅಷ್ಟೋತ್ತರ ಕುಂಕುಮಾರ್ಚನೆ, ೧೧ ಗಂಟೆಗೆ ಮಹಾ ಮಂಗಳಾರತಿ, ೧೧.೩೦ ರಿಂದ ಧಾರ್ಮಿಕ ಸಭೆ, ೧ ಗಂಟೆಗೆ ಪ್ರಸಾದ ವಿನಿಯೋಗ ನಡೆಯಲಿದೆ.