ಶ್ರೀಮಂಗಲ, ಮಾ. ೨: ಪೊನ್ನಂಪೇಟೆ ತಾಲೂಕು ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಸ್ಥಾನದ ಆಡಳಿತ ಮಂಡಳಿಯಿAದ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಮೈಸೂರು ಕಚೇರಿಯಲ್ಲಿ ಭೇಟಿ ಮಾಡಿ ದೇವಸ್ಥಾನದ ಅಭಿವೃದ್ಧಿಯ ಬಗ್ಗೆ ಸಮಾಲೋಚನೆ ನಡೆಸಲಾಯಿತು.ಈ ಸಂದರ್ಭ ದೇವಸ್ಥಾನದ ವಾರ್ಷಿಕ ಉತ್ಸವ ತಾ. ೮ ರಂದು ನಡೆಯಲಿದ್ದು, ಸಂಸದರನ್ನು ಆಡಳಿತ ಮಂಡಳಿಯಿAದ ಅಹ್ವಾನ ಪತ್ರ ನೀಡಿ ಆಹ್ವಾನಿಸಲಾಯಿತು. ದೇವಸ್ಥಾನಕ್ಕೆ ಸದ್ಯದಲ್ಲಿಯೇ ಭೇಟಿ ನೀಡಿ, ಅಭಿವೃದ್ಧಿಗೆ ನೆರವು ನೀಡುವುದಾಗಿ ಸಂಸದರು ಭರವಸೆ ನೀಡಿದರು. ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚೋನಿರ ಸುಬ್ರಮಣಿ, ದೇವತಕ್ಕ ಅಣ್ಣೀರ ದಾದ ಗಣಪತಿ, ನಾಡ್ ತಕ್ಕರಾದ ಕಾಯಪಂಡ ಆಯ್ಯಪ್ಪ, ದೇವಸ್ಥಾನ ಕಾರ್ಯದರ್ಶಿ ಬಲ್ಯಮಿದೇರಿರ ಸಂಪತ್, ಉಪಾಧ್ಯಕ್ಷ ಕಾಯಪಂಡ ಸ್ಟಾಲಿಲ್ ಗಣಪತಿ, ದೇವಸ್ಥಾನ ಆಡಳಿತ ಮಂಡಳಿಯ ಕಾಯಪಂಡ ಸುರೇಂದ್ರ, ಅಣ್ಣೀರ ಲೋಕೇಶ್, ಬಲ್ಯಮಿದೇರಿರ ಚೇತನ್ ಸೋಮಣ್ಣ ಇದ್ದರು.