ಕೂಡಿಗೆ, ಮಾ. ೫: ಶಿರಂಗಾಲ ಗ್ರಾಮದ ಗ್ರಾಮ ದೇವತಾ ಸಮಿತಿಯ ವತಿಯಿಂದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಉಮಾಮಹೇಶ್ವರ ಸ್ವಾಮಿಯ ವಾರ್ಷಿಕ ರಥೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ರಥೋತ್ಸವ ಅಂಗವಾಗಿ ಗಣಪತಿ ಹೋಮ, ಉಮಾಮಹೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ಮಧ್ಯಾಹ್ನ ೧ ಗಂಟೆಗೆ ಶ್ರೀ ಸ್ವಾಮಿಯ ವಿಗ್ರಹವನ್ನು ಅಲಂಕೃತ ಭವ್ಯ ಮಂಟಪದಲ್ಲಿ ಕುಳ್ಳಿರಿಸಿ ಪೂಜೆ ಸಲ್ಲಿಸಿ ವೀರಗಾಸೆ ಮತ್ತು ಮಂಗಳ ವಾದ್ಯ, ಡೊಳ್ಳು ಕುಣಿತ ಕಲಾ ತಂಡಗಳೊAದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಸಂದರ್ಭ ಭಕ್ತರಿಗೆ ತಂಪು ಪಾನೀಯಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಗ್ರಾಮ ದೇವತಾ ಸಮಿತಿ ಅಧ್ಯಕ್ಷ ನೇಮೇಶ್, ಕಾರ್ಯದರ್ಶಿ ಎಸ್.ಟಿ. ವೆಂಕಟೇಶ್, ಉಪಾಧ್ಯಕ್ಷ ಬೋಜರಾಜ್, ಮಾಜಿ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಪ್ರಮುಖರಾದ ಲೋಕೇಶ್, ಹೆಚ್.ಎಸ್. ಬಸವರಾಜ್, ಶ್ರೀನಿವಾಸ್, ಧನೇಂದ್ರ ಕುಮಾರ್, ಉಮೇಶ್, ಡಿ. ಶೇಖರ್, ವೀರಭದ್ರಪ್ಪ, ಹರ್ಷ, ಸೋಮಣ್ಣ ಸೇರಿದಂತೆ ಸಮಿತಿ ನಿರ್ದೇಶಕರು, ಮಂಟಿಗಮ್ಮ ದೇವಾಲಯ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.
ಭಕ್ತರಿಗೆ ಸಮಿತಿ ವತಿಯಿಂದ ಅನ್ನಸಂರ್ತಪಣೆ ಏರ್ಪಡಿಸಲಾಗಿತ್ತು. ಮೆರವಣಿಗೆಯ ನಂತರ ದೇವಾಲಯದಲ್ಲಿ ಪೂಜೋತ್ಸವ, ಜಾತ್ರೋತ್ಸವು ನಡೆಯಿತು.