ಸೋಮವಾರಪೇಟೆ, ಮಾ. ೫: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ವತಿಯಿಂದ ಎಲ್ಲಾ ತಾಲೂಕು ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಗೀತಗಾಯನ ಸ್ಪರ್ಧೆಯಲ್ಲಿ ವಿಜೇತರಾದವರ ವಿವರ ಇಂತಿದೆ.
ವೀರಾಜಪೇಟೆ ತಾಲೂಕಿನಲ್ಲಿ ನಡೆದ ಪ್ರಾಥಮಿಕ ಶಾಲಾ ವಿಭಾಗದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಟನಿಷ ಕೆ.ಕೆ. ಪ್ರಥಮ, ಆಯಿಷಾ ನಜೀರ್ ದ್ವಿತೀಯ, ತ್ರಿಶಾಲ್ ತೃತೀಯ ಸ್ಥಾನ ಪಡೆದರೆ, ಪೊನ್ನಂಪೇಟೆ ತಾಲೂಕು ಪ್ರೌಢಶಾಲಾ ವಿಭಾಗದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಇಶಾನಿ ಬಿ. ರೈ (ಪ್ರ) ಚೈತ್ರಾ ಚಿನ್ನಮ್ಮ (ದ್ವಿ) ದೀಪ್ತಿ ದೇಚಮ್ಮ (ತೃ) ಸ್ಥಾನ ಗಳಿಸಿದ್ದಾರೆ. ಸೋಮವಾರಪೇಟೆ ತಾಲೂಕು ಪ್ರಾಥಮಿಕ ಶಾಲಾ ವಿಭಾಗದ ಜಾನಪದ ಗೀತೆ ಸ್ಪರ್ಧೆಯಲ್ಲಿ ಹಿತೈಷಿ ಕೆ.ಜಿ. (ಪ್ರ) ವಿಶಾಖ (ದ್ವಿ) ಮಯೂರ್ (ತೃ), ಮಡಿಕೇರಿ ತಾಲೂಕು ಪದವಿಪೂರ್ವ ಕಾಲೇಜು ವಿಭಾಗದ ಜಾನಪದ ಗೀತೆ ಸ್ಪರ್ಧೆಯಲ್ಲಿ ಮೋನಿಶಾ ಡಿ. ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಜಿಲ್ಲಾಧ್ಯಕ್ಷ ಚಾಮೇರ ದಿನೇಶ್ ತಿಳಿಸಿದ್ದಾರೆ.