ಮಡಿಕೇರಿ, ಮಾ. ೫: ನಗರದ ಶ್ರೀ ಕೋದಂಡ ರಾಮ ದೇವಾಲಯ ಸಮಿತಿ ವತಿಯಿಂದ ತಾ. ೨೮ ರಂದು ಆಯೋಜಿತ ಶ್ರೀ ರಾಮನವಮಿ ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಸಕ್ತ ಕಲಾ ತಂಡಗಳಿAದ ಅರ್ಜಿ ಆಹ್ವಾನಿಸಲಾಗಿದೆ.

ನಗರದ ಗಾಂಧಿ ಮೈದಾನದಲ್ಲಿ ತಾ. ೨೮ ರಂದು ಸಂಜೆ ೬ ಗಂಟೆಯಿAದ ರಾತ್ರಿ ೧೦ ಗಂಟೆಯವರೆಗೆ ಆಯೋಜಿತ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜಿಲ್ಲೆಯ ಕಲಾವಿದರು, ಕಲಾ ತಂಡಗಳು ಪ್ರದರ್ಶನಕ್ಕೆ ಅರ್ಜಿ ಸಲ್ಲಿಸಬಹುದು. ಭಕ್ತಿ ಮತ್ತು ದೇಶ ಪ್ರೇಮ ಸಂಬAಧಿತ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ. ೧ ತಂಡಕ್ಕೆ ಕನಿಷ್ಟ ೧೦ ನಿಮಿಷ ಮಾತ್ರ ಪ್ರದರ್ಶನಕ್ಕ ಅವಕಾಶ ಇರುತ್ತದೆ.

ಸಾಂಸ್ಕೃತಿಕ ಸಮಿತಿಯ ಆಯ್ಕೆಯೆ ಅಂತಿಮವಾಗಿದ್ದು, ಅರ್ಜಿ ಸಲ್ಲಿಸಲು ತಾ. ೧೨ ಕೊನೆ ದಿನವಾಗಿದೆ. ಅರ್ಜಿಗಳನ್ನು ಶ್ರೀ ರಾಮೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ, ಕೇರಾಫ್ ಅಮೂಲ್ಯ ಎಂಟರ್‌ಪ್ರೆöÊಸರ್, ಶ್ರೀ ಓಂಕಾರೇಶ್ವರ ದೇವಾಲಯ ರಸ್ತೆ ಮಡಿಕೇರಿ - ೫೭೧೨೦೧ ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಹರಿಣಿ ವಿಜಯ್, ಸಂಚಾಲಕಿ, ಶ್ರೀ ರಾಮೋತ್ಸವ ಸಾಂಸ್ಕೃತಿಕ ಸಮಿತಿ. ಮಡಿಕೇರಿ. - ೯೭೪೦೯೭೦೮೪೦ ಸಂಪರ್ಕಿಸಬಹುದಾಗಿದೆ.