ಗೋಣಿಕೊಪ್ಪಲು, ಮಾ. ೭: ಕಾಂಗ್ರೆಸ್ ಪಕ್ಷ ಪೊಲೀಸ್ ಠಾಣೆಗಳನ್ನು ಎಂದಿಗೂ ತನ್ನ ಕಚೇರಿಯನ್ನಾಗಿ ಮಾಡಿಕೊಂಡಿಲ್ಲ. ಮುಂದೆಯೂ ಮಾಡಿಕೊಳ್ಳುವ ಇಚ್ಚೆಯೂ ನಮ್ಮದಲ್ಲ. ಶಾಸಕ ಎ.ಎಸ್.ಪೊನ್ನಣ್ಣನವರ ಅಧಿಕೃತ ಕಚೇರಿಯಲ್ಲಿಯೇ ಪ್ರತಿನಿತ್ಯ ನೂರಾರು ಜನ ಆಗಮಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆಯುತ್ತಿದ್ದಾರೆ ಎಂದು ಗೋಣಿಕೊಪ್ಪಲುವಿನಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖ ಕೊಲ್ಲಿರ ಬೋಪಣ್ಣ ಪ್ರತಿಕ್ರಿಯಿಸಿದ್ದಾರೆ.

ನಾಪೋಕ್ಲುವಿನಲ್ಲಿ ನಡೆದ ಘಟನೆಗೆ ಸಂಬAಧಿಸಿದAತೆ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರು ತಮ್ಮ ಮನಸ್ಸಿಗೆ ಬಂದAತೆ ಮಾತನಾಡಿರುವುದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಬಹುದೊಡ್ಡ ಜವಾಬ್ದಾರಿಯನ್ನು ನಿಭಾಯಿಸಿದ್ದ ಮಾಜಿ ಶಾಸಕ ಬೋಪಯ್ಯನವರು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುತ್ತಿರುವುದು ಸರಿಯಲ್ಲ.

ಘಟನೆಗೆ ಸಂಬAಧಿಸಿದAತೆ ಪೊಲೀಸರು ಸಕಾಲದಲ್ಲಿ ಕ್ರಮ ಕೈಗೊಳ್ಳುವ ಮೂಲಕ ತಮ್ಮ ಪೊಲೀಸ್ ಇಲಾಖೆಯ ಕರ್ತವ್ಯವನ್ನು ನಿಭಾಯಿಸಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಬೋಪಣ್ಣ ತಿಳಿಸಿದ್ದಾರೆ. ನಾಪೋಕ್ಲು ಪ್ರಕರಣದಲ್ಲಿ ಧ್ವನಿ ಎತ್ತಿರುವ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರು ಈ ಹಿಂದೆ ಕಟ್ಟೆಮಾಡು ಪ್ರಕರಣದಲ್ಲಿ ಧ್ವನಿ ಎತ್ತದಿರಲು ಕಾರಣವೇನು.? ಎರಡು ಸಮುದಾಯಗಳನ್ನು ಒಂದೆಡೆ ಸೇರಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಏಕೆ ಮಾಡಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರ ಆಪಟ್ಟಿರ ಟಾಟೂ ಮೊಣ್ಣಪ್ಪ ಪ್ರಶ್ನಿಸಿದ್ದಾರೆ.ಕೊಡಗು ಜಿಲ್ಲೆಯು ಸಾಮರಸ್ಯದಿಂದಿದೆ. ಸಮಾಜದ ಶಾಂತಿ ಸೌಹಾರ್ದತೆಗೆ ಧÀಕ್ಕೆ ಬರದಂತೆ ಕೆಲಸ ನಿರ್ವಹಿಸಲಿ ಎಂದು ಸಲಹೆ ನೀಡಿದರು. ಜಿಲ್ಲೆಯ ಉದ್ದಗಲಕ್ಕೂ ಹಿಂದೂ ಸಂಗಮ ಕಾರ್ಯಕ್ರಮವು ಯಶಸ್ವಿಯಾಗಿ ನಡೆದಿದೆ. ಸಂಘದ ಕಾರ್ಯಕ್ರಮವನ್ನು ಕೆಲ ಬಿಜೆಪಿ ನಾಯಕರುಗಳು ಬಿಜೆಪಿ ಪಕ್ಷದ ಕಾರ್ಯಕ್ರಮವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಗೋಣಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಆರೋಪ ಮಾಡಿದರು. ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೂಡ ಭಾಗಿಯಾಗಿದ್ದಾರೆ. ಆರ್‌ಎಸ್‌ಎಸ್ ಸಂಘಟನೆಯ ಕಾರ್ಯಕ್ರಮವನ್ನು ಬಿಜೆಪಿ ಪಕ್ಷ ತನ್ನ ಕಾರ್ಯಕ್ರಮವೆಂದು ಬಿಂಬಿಸಿಕೊಳ್ಳುವುದನ್ನು ಸಂಘವು ಗಮನಿಸಬೇಕು. ಹಿಂದೂಗಳನ್ನು ಬಿಜೆಪಿ ಪಕ್ಷವು ಇಬ್ಬಾಗ ಮಾಡುವ ಹುನ್ನಾರ ನಡೆಸುತ್ತಿದೆ. ಈ ಬಗ್ಗೆ ಸಂಘ ಎಚ್ಚರಿಕೆ ವಹಿಸುವುದು ಒಳಿತು ಎಂದರು. ಪತ್ರಿಕಾಗೋಷ್ಠಿಯಲ್ಲಿ ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಅಣ್ಣಿರ ಹರೀಶ್ ಉಪಸ್ಥಿತರಿದ್ದರು.