ಮಡಿಕೇರಿ ಮಾ. ೮: ಕುಶಾಲನಗರದ ಪುಣ್ಯಕೋಟಿ ಗೋಶಾಲೆಗೆ ವಿಶ್ವ ಹಿಂದೂ ಪರಿಷತ್‌ನ ಕೊಡಗು ಜಿಲ್ಲಾ ಘಟಕದ ನಿಯೋಗ ಭೇಟಿ ನೀಡಿತು.
ಸುಮಾರು ೬೦ ಗೋವುಗಳಿರುವ ಗೋಶಾಲೆಯ ಮೂಲಭೂತ ಸೌಲಭ್ಯಗಳ ಸ್ಥಿತಿಗತಿಯನ್ನು ಪರಿಶೀಲಿಸಿದ ಪ್ರಮುಖರು, ಗೋಪೂಜೆ ಮಾಡಿ ಪ್ರಾರ್ಥಿಸಿದರು. ನಂತರ ಒಂದು ಲಾರಿ ಒಣ ಹುಲ್ಲು, ಹಸಿ ಹುಲ್ಲು ಮತ್ತು ಏಳು ಚೀಲ ತೆಂಗಿನ ಹಿಂಡಿಯನ್ನು ನೀಡಿದರು.
ವಿಶ್ವ ಹಿಂದೂ ಪರಿಷತ್‌ನ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಪ್ರಮುಖರಾದ ಸಂಪತ್ ಕುಮಾರ್ ಮಡಿಕೇರಿ, ಪರಮೇಶ್ ಸೋಮವಾರಪೇಟೆ, ನರಸಿಂಹ ಸುಂಟಿಕೊಪ್ಪ, ಬಜರಂಗದಳದ ಪ್ರಮುಖರಾದ ವಿನಯ್, ತನ್ಮಯ್ ಸೋಮವಾರಪೇಟೆ, ಮೂರ್ನಾಡು ಘಟಕದ ಕಾರ್ಯಕರ್ತರು, ಮಾತೆಯರು ಮತ್ತಿತರರು ಹಾಜರಿದ್ದು ಗೋಶಾಲೆಯ ಅಭಿವೃದ್ಧಿ ಹಾಗೂ ಗೋವುಗಳ ರಕ್ಷಣೆಗಾಗಿ ಅಗತ್ಯ ಸಲಹೆಗಳನ್ನು ನೀಡಿದರು.