ಕೂಡಿಗೆ, ಮಾ. ೮: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದ ಜಯಮ್ಮ ಎಂಬವರಿಗೆ ಸೇರಿದ ಮನೆಯ ಮೇಲ್ಛಾವಣಿಯು ಬಿದ್ದ ಪರಿಣಾಮವಾಗಿ ಮನೆಯೂ ಸಂಪೂರ್ಣವಾಗಿ ಹಾಳಾಗಿರುವ ಹಿನ್ನೆಲೆಯಲ್ಲಿ, ಶಾಸಕರ ಗಮನಕ್ಕೆ ತಂದ ಅರ್ಜಿದಾರರಿಗೆ ನೂತನ ಮನೆ ನಿರ್ಮಾಣ ಮಾಡಿಕೊಡುವ ಭರವಸೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ನೀಡಿದ್ದಾರೆ.
ಶಾಸಕರು ಕಂದಾಯ ಇಲಾಖೆಯ ವತಿಯಿಂದ ಮಾಹಿತಿಯನ್ನು ಪಡೆದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬವಾಗಿರುವ ಹಿನ್ನೆಲೆಯಲ್ಲಿ ಸಂಬAಧಿಸಿದ ಇಲಾಖೆಗೆ ನಿಯಮಾನುಸಾರ ನೂತನ ಮನೆಯ ನಿರ್ಮಾಣಕ್ಕೆ ಸಹಕಾರ ನೀಡುವಂತೆ ಸೂಚನೆ ನೀಡಿದರು.