ಟೆಹರಾನ್, ಮಾ. ೧೧: ಕಳೆದ ಫೆಬ್ರವರಿ ೨೮ ರಂದು ಆರಂಭಗೊAಡಿರುವ ಇಸ್ರೇಲ್, ಅಮೆರಿಕಾ - ಇರಾನ್ ನಡುವಿನ ಯುದ್ದದಲ್ಲಿ ಬಹುವಾಗಿ ಕೇಳಿಬರುತ್ತಿರುವ ಹೆಸರು ಹೊರ್ಮುಜ್ ಜಲಸಂಧಿಯದ್ದು. ಇಂದು ವಿಶ್ವದಲ್ಲಿ ಬಹುತೇಕ ಸರಕು ಸಾಗಾಟ ಜಲಮಾರ್ಗದ ಮೂಲಕವೇ ನಡೆಯುತ್ತದೆ. ಜಲಮಾರ್ಗದ ಸಾಗಾಟ ಅಗ್ಗ ಆಗಿರುವುದೇ ಇದಕ್ಕೆ ಕಾರಣ.

ಈಗಾಗಲೇ ಯುದ್ದ ಪ್ರಾರಂಭಗೊAಡಿರುವ ಎರಡು ವಾರದಲ್ಲಿ ಯೂರೋಪ್ ಹಾಗೂ ಏಷ್ಯಾದ ಇತರ ದೇಶಗಳಲ್ಲಿ ಕೆಲ ವಸ್ತುಗಳ ದರ ಏರಿಕೆ ಆಗಿರುವುದನ್ನು ನೀವು ಗಮನಿಸಿರಬಹುದು. ಭಾರತದಲ್ಲೂ ಅಡುಗೆ ಅನಿಲ ದರ ದಿಢೀರನೇ ಸಿಲಿಂಡರ್‌ಗೆ ೬೦ ರೂಪಾಯಿ ದುಬಾರಿ ಆಗಿದೆ. ಕಚ್ಚಾ ತೈಲ ದರ ಬ್ಯಾರಲ್‌ಗೆ ೮೦ ರಿಂದ ೧೧೦ ಡಾಲರ್‌ಗೆ ಜಿಗಿದಿರುವುದೇ ಇದಕ್ಕೆ ಕಾರಣ.

ಹೊರ್ಮುಜ್ ಜಲಸಂಧಿ ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದೊಂದಿಗೆ ಸಂಪರ್ಕಿಸುವ ಕಿರಿದಾದ ಸಮುದ್ರ ಮಾರ್ಗವಾಗಿದ್ದು, ಅನೇಕ ಮಧ್ಯಪ್ರಾಚ್ಯ ದೇಶಗಳಿಂದ ತೈಲ ರಫ್ತಿಗೆ ಏಕೈಕ ಸಮುದ್ರ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ.

ಭೌಗೋಳಿಕವಾಗಿ, ಜಲಸಂಧಿಯು ಉತ್ತರದಲ್ಲಿ ಇರಾನ್ ಮತ್ತು ದಕ್ಷಿಣದಲ್ಲಿ ಓಮನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವೆ ಇದೆ. ಇದು ಸುಮಾರು ೫೫-೯೫ ಕಿಮೀ ಅಗಲವಿದೆ, ಆದರೆ ದೊಡ್ಡ ತೈಲ ಟ್ಯಾಂಕರ್‌ಗಳು ಬಳಸುವ ಹಡಗು ಮಾರ್ಗಗಳು ಹೆಚ್ಚು ಕಿರಿದಾಗಿರುತ್ತವೆ. ಈ ಮಾರ್ಗಗಳು ಹಡಗುಗಳು ಎರಡು ದಿಕ್ಕುಗಳಲ್ಲಿ ಚಲಿಸಲು ಅನುವು ಮಾಡಿಕೊಡುತ್ತದೆ ಮತ್ತು ಘರ್ಷಣೆಯ ಅಪಾಯವನ್ನು ಕಡಿಮೆ ಮಾಡಲು ಬಫರ್ ವಲಯದಿಂದ ಬೇರ್ಪಡಿಸಲ್ಪಟ್ಟಿವೆ.

ಇದನ್ನು ವಿಶ್ವದ ಅತ್ಯಂತ ನಿರ್ಣಾಯಕ ತೈಲ ಚಾಕ್‌ಪಾಯಿಂಟ್ ಎಂದು ಪರಿಗಣಿಸಲಾಗಿದೆ. ಏಕೆಂದರೆ ವಿಶ್ವದಲ್ಲಿ ನಿತ್ಯಸಾಗಾಣೆ ಆಗುವ ಐದನೇ ಒಂದು ಭಾಗದಷ್ಟು ಕಚ್ಚಾ ತೈಲ ಈ ಮಾರ್ಗದಲ್ಲೇ ಸಾಗಾಟ ಆಗುತ್ತದೆ. ಪ್ರತಿದಿನ, ಸುಮಾರು ೨೦ ಮಿಲಿಯನ್ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಈ ಮಾರ್ಗದ ಮೂಲಕ ಹಾದು ಹೋಗುತ್ತವೆ. ಇದು ಜಾಗತಿಕ ತೈಲ ಬಳಕೆಯ ಸರಿಸುಮಾರು ೨೦-೨೫% ಮತ್ತು ವಿಶ್ವದ ದ್ರವೀಕೃತ ನೈಸರ್ಗಿಕ ಅನಿಲ (ಐಓಉ) ವ್ಯಾಪಾರದ ದೊಡ್ಡ ಪಾಲನ್ನು ಹೊಂದಿದೆ. ಈ ಬೃಹತ್ ಇಂಧನ ಹರಿವಿನಿಂದಾಗಿ, ಜಲಸಂಧಿಯಲ್ಲಿನ ಯಾವುದೇ ಅಡಚಣೆಯು ಜಾಗತಿಕ ತೈಲ ಬೆಲೆಗಳು ಮತ್ತು ವಿಶ್ವ ಆರ್ಥಿಕತೆಯ ಮೇಲೆ ತ್ವರಿತವಾಗಿ ಪರಿಣಾಮ ಬೀರುತ್ತದೆ.

ತೈಲ ಉತ್ಪಾದಿಸುವ ಅನೇಕ ಪ್ರಮುಖ ದೇಶಗಳು ತಮ್ಮ ಇಂಧನ ಸಂಪನ್ಮೂಲಗಳನ್ನು ರಫ್ತು ಮಾಡಲು ಈ ಜಲಮಾರ್ಗವನ್ನು ಅವಲಂಬಿಸಿವೆ. ಇವುಗಳಲ್ಲಿ ಸೌದಿ ಅರೇಬಿಯಾ, ಇರಾನ್, ಇರಾಕ್, ಕುವೈತ್, ಕತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿವೆ. ಜಲಸಂಧಿಯ ಮೂಲಕ ಸಾಗಿಸಲಾಗುವ ಹೆಚ್ಚಿನ ತೈಲವು ಚೀನಾ, ಭಾರತ, ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ಏಷ್ಯಾದ ಮಾರುಕಟ್ಟೆಗಳಿಗೆ ಹೋಗುತ್ತದೆ, ಇದು ಈ ದೇಶಗಳ ಇಂಧನ ಭದ್ರತೆಗೆ ಮುಖ್ಯವಾಗಿದೆ.

ಜಲಸಂಧಿಯು ಪ್ರಮುಖ ಭೌಗೋಳಿಕ ರಾಜಕೀಯ ಮಹತ್ವವನ್ನು ಹೊಂದಿದೆ. ಅದರ ಕಾರ್ಯತಂತ್ರದ ಸ್ಥಳದಿಂದಾಗಿ, ಇದು ದಶಕಗಳಿಂದ ಮಿಲಿಟರಿ ಉದ್ವಿಗ್ನತೆ ಮತ್ತು ಸಂಘರ್ಷಗಳ ಕೇಂದ್ರಬಿAದುವಾಗಿದೆ. ೧೯೮೦ ರ ದಶಕದಲ್ಲಿ ಇರಾನ್-ಇರಾಕ್ ಯುದ್ಧದ ಸಮಯದಲ್ಲಿ, "ಟ್ಯಾಂಕರ್ ಯುದ್ಧ" ಎಂದು ಕರೆಯಲ್ಪಡುವ ತೈಲ ಟ್ಯಾಂಕರ್‌ಗಳ ಮೇಲೆ ಎರಡೂ ಕಡೆಯವರು ದಾಳಿ ಮಾಡಿದರು. ಜಲಸಂಧಿಯಲ್ಲಿ ಸಾಗಣೆಗೆ ಬೆದರಿಕೆ ಇದ್ದರೆ ಜಾಗತಿಕ ಇಂಧನ ಸರಬರಾಜುಗಳು ಎಷ್ಟು ದುರ್ಬಲವಾಗಬಹುದು ಎಂಬುದು ಭಾರತ ಸೇರಿದಂತೆ ಏಷ್ಯಾದ ದೇಶಗಳಲ್ಲಿ ತೈಲ ಸರಬರಾಜಿನ ವ್ಯತ್ಯಯದಿಂದ ನಿತ್ಯ ಜೀವನ ಏರು ಪೇರಾಗುತ್ತಲಿದೆ.

ಕೆಲವು ದೇಶಗಳು ಜಲಸಂಧಿಯನ್ನು ಬೈಪಾಸ್ ಮಾಡಲು ಪೈಪ್‌ಲೈನ್‌ಗಳನ್ನು ನಿರ್ಮಿಸಿದ್ದರೂ, ಈ ಪರ್ಯಾಯಗಳು ಅದರ ಮೂಲಕ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಸಾಗಿಸಲಾಗುವ ಒಟ್ಟು ತೈಲದ ಒಂದು ಸಣ್ಣ ಭಾಗವನ್ನು ಮಾತ್ರ ನಿರ್ವಹಿಸಬಲ್ಲವು. ಆದ್ದರಿಂದ, ಜಾಗತಿಕ ಇಂಧನ ಮಾರುಕಟ್ಟೆಯು ಈ ಕಿರಿದಾದ ಕಾರಿಡಾರ್ ಮೂಲಕ ಹಡಗುಗಳ ನಿರಂತರ ಸುರಕ್ಷಿತ ಮಾರ್ಗದ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಈ ನಡುವೆ ಅಮೇರಿಕಾ ಅಧ್ಯಕ್ಷ ಟ್ರಂಪ್ ಹೊರ್ಮುಜ್ ಜಲಸಂಧಿಗೆ ಅಮೇರಿಕ ಸೇನಾ ಹಡಗುಗಳನ್ನು ಕಳಿಸಿ ತೈಲ ಸಾಗಾಟದ ಟ್ಯಾಂಕರ್ ಹಡಗುಗಳಿಗೆ ರಕ್ಷಣೆ ಒದಗಿಸುವ ಮಾತಾಡಿದ್ದಾರೆ, ಆದರೆ ಇರಾನ್ ಇದಕ್ಕೆ ಪ್ರತ್ಯುತ್ತರ ನೀಡಿದ್ದು ಅಮೇರಿಕ ಹಡಗುಗಳು ಬಂದರೆ ಸಮುದ್ರ ತಳ ಸೇರಬೇಕಷ್ಟೆ ಎಂದು ಎಚ್ಚರಿಸಿದೆ. ಇಂದು ಕೊಲ್ಲಿ ರಾಷ್ಟ್ರಗಳಲ್ಲಿ ಇರಾನ್ ಕೂಡ ಸಾಕಷ್ಟು ಸಾಮರ್ಥ್ಯವುಳ್ಳ (ಯಥೇಚ್ಚ ಯುರೇನಿಯಂ ಹೊಂದಿರುವ) ರಾಷ್ಟ್ರವಾಗಿದ್ದು ಅಮೆರಿಕ ಮತ್ತು ಇಸ್ರೇಲ್ ಏಕಾಎಕಿ ಹೊರ್ಮುಜ್ ಜಲಸಂಧಿಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗೆ ಮಾಡಬೇಕಾದರೆ ಇರಾನ್‌ನ್ನು ಸಂಪೂರ್ಣ ಯುದ್ದದಲ್ಲಿ ಮಣಿಸಬೇಕಾಗುತ್ತದೆ. ಒಂದು ವೇಳೆ ಪೂರ್ಣ ಪ್ರಮಾಣದ ಯುದ್ದ ಸಂಭವಿಸಿದರೆ ಪರಿಣಾಮ ಮತ್ತಷ್ಟು ಭೀಕರವಾಗಲಿದೆ. ಹೀಗಾಗಿ ಅಮೆರಿಕ -ಇಸ್ರೇಲ್ ನಿಧಾನಕ್ಕೆ ಮುಂದುವರೆಯುತ್ತಿದ್ದರೆ ಇರಾನ್ ಗಾಯಗೊಂಡ ರಾಷ್ಟ್ರವಾಗಿದ್ದು ಸೂಕ್ತ ಪ್ರತೀಕಾರಕ್ಕೆ ಎದುರು ನೋಡುತ್ತಿದೆ.

ಹೊರ್ಮುಜ್‌ನಲ್ಲಿ ಹಡಗು ಸಾಗಾಟ ಸ್ಥಗಿತ

ಹೊರ್ಮುಜ್ ಜಲಸಂಧಿಯ ಮೂಲಕ ಪ್ರತಿನಿತ್ಯ ನೂರಕ್ಕೂ ಹೆಚ್ಚು ಹಡಗುಗಳು ಸಂಚರಿಸುತ್ತವೆ. ಆದರೆ ಯುದ್ದದ ಆರಂಭದ ನಂತರ ಈ ತಿಂಗಳಿನಲ್ಲಿ ಈವರೆಗೆ ಕೇವಲ ೨೦ ಹಡಗುಗಳು ಮಾತ್ರ ಇಲ್ಲಿ ಸಾಗಾಟ ನಡೆಸಿವೆ. ಇಲ್ಲಿ ಸಾಗಾಟ ನಡೆಸುವ ಹಡಗುಗಳ ಮೇಲೆ ಕ್ಷಿಪಣಿ ಧಾಳಿ ನಡೆದು ಹಡಗು ಮುಳುಗಿದರೆ/ ನಾಶಗೊಂಡರೆ ವಿಮಾ ಹಣ ನೀಡುವುದಿಲ್ಲ ಎಂದು ವಿಮಾ ಕಂಪೆನಿಗಳು ಎಚ್ಚರಿಸಿರುವುದೇ ಇದಕ್ಕೆ ಕಾರಣವಾಗಿದೆ. (ಸಾಮಾನ್ಯವಾಗಿ ಪ್ರತಿಬಂಧಕಾಜ್ಞೆ, ಬಂದ್, ಗಲಭೆ, ಪ್ರಕ್ಷುಬ್ದ ಪರಿಸ್ಥಿತಿ ಇದ್ದಾಗ ಇಲ್ಲೂ ವಿಮಾ ಕಂಪೆನಿಗಳು ವಿಮೆ ನಿರಾಕರಿಸುತ್ತವೆ). ಒಂದು ತೈಲ ಸಾಗಾಟದ ದೊಡ್ಡ ಟ್ಯಾಂಕರ್ ಹಡಗಿನ ಬೆಲೆ ಸುಮಾರು ೭೦೦ ರಿಂದ ೧೦೦೦ ಕೋಟಿ ರೂಪಾಯಿವರೆಗೆ ಇರುತ್ತದೆ ಇದರಲ್ಲಿ ಒಂದು ಫುಟ್‌ಬಾಲ್ ಮೈದಾನದಷ್ಟು ದೊಡ್ಡ ಸಂಗ್ರಹ ವ್ಯವಸ್ಥೆ ಇರುತ್ತದೆ. ಇದರಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ಒಂದು ಮಿಲಿಯನ್ ಬ್ಯಾರೆಲ್‌ನಿಂದ ೨ ಮಿಲಿಯನ್ ಬ್ಯಾರೆಲ್‌ವರೆಗೂ ಕಚ್ಚಾ ತೈಲ ಸಾಗಾಟ ಮಾಡಬಹುದಾಗಿದೆ. ಈ ತೈಲ ಮೌಲ್ಯವೂ ಸುಮಾರು ೭೫೦ ರಿಂದ ೧೫೦೦ ಕೋಟಿ ರೂಪಾಯಿಗಳಷ್ಟು ಆಗಬಹುದು. ಹಡಗು ಮುಳುಗಿದರೆ ಒಟ್ಟು ೨೦೦೦ ಕೋಟಿ ರೂಪಾಯಿಗಳಿಗೂ ಹೆಚ್ಚು ನಷ್ಟ ಆಗುವುದರಿಂದ ಯಾವುದೇ ಶಿಪ್ಪಿಂಗ್ ಕಂಪೆನಿ ವಿಮೆ ಇಲ್ಲದೆ ಹಡಗು ಸಾಗಾಟಕ್ಕೆ ಒಪ್ಪುತ್ತಿಲ್ಲ. ಹೀಗಾಗಿ ಅನೇಕ ದೇಶಗಳಲ್ಲಿ ಅಗತ್ಯ ವಸ್ತು ದರ ಏರುಪೇರಾಗಿದೆ. ಒಂದು ಹಡಗಿಗೆ ಹಡಗಿನ ಒಟ್ಟು ಮೌಲ್ಯದ ಶೇಕಡಾ ೦.೨ ರಷ್ಟು ವಾರ್ಷಿಕ ವಿಮಾ ಪ್ರೀಮಿಯಂ ಇರುತ್ತದೆ. ಈ ಯುದ್ದದ ಸಂದರ್ಭದಲ್ಲಿ ವಿಮಾ ಕಂಪೆನಿಗಳು ಪ್ರೀಮಿಯಂ ಅನ್ನು ಐದು ಪಟ್ಟು ಹೆಚ್ಚು ಮಾಡಿದ್ದು ಶೇಕಡ ೧ ಕ್ಕೆ ಹೆಚ್ಚಿಸಿವೆ. ಅಂದರೆ ಈಗ ಒಂದು ಹಡಗಿಗೆ ಸುಮಾರು ೨೦ ಕೋಟಿ ರೂಪಾಯಿಗಳ ವರೆಗೆ ವಿಮಾ ಪ್ರೀಮಿಯಂ ಹಣ ನೀಡಬೇಕಾಗುತ್ತದೆ. ಇದರಲ್ಲಿ ಹಡಗಿನ ಸರಕಿನ ಮೌಲ್ಯ ಸೇರಿಲ್ಲ; ಅದಕ್ಕೆ ಪ್ರತ್ಯೇಕ ವಿಮೆ ಮಾಡಿಸಬೇಕಾಗಿದೆ. ಹೀಗಾಗಿ ಸಾಗಾಟ ಕಂಪೆನಿಗಳು ಹಡಗು ನಿಲ್ಲಿಸಿವೆ.

ದೇಶಗಳ ಜಲ ಗಡಿಯ ಹಕ್ಕು

ವಿಶ್ವಸಂಸ್ಥೆಯೇ ನಿರ್ಧರಿಸಿರುವಂತೆ ಪ್ರತೀ ದೇಶದ ಭೂ ಪ್ರದೇಶದ ೨೨ ಕಿಲೋಮೀಟರ್ ವ್ಯಾಪ್ತಿಯ ಜಲ ಪ್ರದೇಶ ಸಹಜವಾಗಿಯೇ ಆ ದೇಶದ ಪೂರ್ಣ ಹಕ್ಕಿಗೆ ಒಳಪಟ್ಟಿರುತ್ತದೆ. ಇದನ್ನು ಟೆರಿಟೋರಿಯಲ್ ವಾಟರ್ಸ್ ಎಂದು ಗುರುತಿಸಲಾಗುತ್ತದೆ. ದೇಶದ ಭೂಮಿಯಿಂದ ೪೪ ಕಿಲೋಮೀಟರ್ ವ್ಯಾಪ್ತಿಯನ್ನು ಪಕ್ಕದ ವಲಯ ಎಂದು ಗುರುತಿಸಲಾಗಿದ್ದು, ಭೂ ಪ್ರದೇಶದಿಂದ ೩೭೦ ಕಿಲೋಮೀಟರ್ ವರೆಗಿನ ಪ್ರದೇಶವನ್ನೂ ವಿಶೇಷ ಆರ್ಥಿಕ ವಲಯ ಎಂದು ಗುರುತಿಸಲಾಗಿದೆ. ಇದರಲ್ಲಿ ೨೨ ಕಿಮೀವರೆಗೆ ಸಂಪೂರ್ಣ ಹಕ್ಕು, ೪೪ ಕಿಲೋಮೀಟರ್ ವರೆಗೆ ಭಾಗಶಃ ಹಕ್ಕು ಮತ್ತು ೩೭೦ ಕಿಮೀ ವರೆಗೆ ಆರ್ಥಿಕ ಚಟುವಟಿಕೆ ನಡೆಸುವ ಹಕ್ಕನ್ನು ಹೊಂದಿರುತ್ತವೆ.