ಭಾಗಮAಡಲ, ಮಾ.೧೧; ಮದ್ಯದ ಅಮಲಿನಲ್ಲಿ ವ್ಯಕ್ತಿಯೋರ್ವ ಈರ್ವರನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಿರುವ ಘಟನೆ ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಚೇರಿ ಗ್ರಾಮದ ಕಾನಕಂಡಿ ಎಂಬಲ್ಲಿ ನಡೆದಿದೆ.

ಕುಂದಚೇರಿ ಗ್ರಾಮದ ಕಾನಕಂಡಿ ಪರಿಶಿಷ್ಟರ ಕಾಲೋನಿಯಲ್ಲಿ ವಾಸವಿದ್ದ ಯಶೋದ (೫೦) ಹಾಗೂ ಕುಂಞರಾಮ(೫೫) ಎಂಬವರುಗಳೇ ಹತ್ಯೆಗೀಡಾದ ದುರ್ದೈವಿಗಳು. ಚಂದು (೬೦) ಎಂಬಾತ ಹತ್ಯೆ ಮಾಡಿದ ಆರೋಪಿಯಾಗಿದ್ದು, ಭಾಗಮಂಡಲ ಪೊಲೀಸರು ಆತನನ್ನು ಬಂದಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಡಿಯ ಜನಾಂಗಕ್ಕೆ ಸೇರಿದ ಇವರುಗಳು ಸಂಬAಧಿಕರಾಗಿದ್ದು ಅವಿವಾಹಿತಳಾಗಿರುವ ಯಶೋದ ತನ್ನ ತಾಯಿ ಬೆಳ್ಳಕ್ಕಿಯೊಂದಿಗೆ ನೆಲೆಸಿದ್ದಳು. ಸಂಬAಧಿಕರಾಗಿದ್ದ ಕುಂಞÂರಾಮ ಹಾಗೂ ಯಶೋದ ಅವರೊಂದಿಗೆ ಸಂಬAಧವಿದ್ದಿತು. ಇದು ಯಶೋದಳ ದೊಡ್ಡಪ್ಪನ ಮಗ ಚಂದುವಿಗೆ ಇಷ್ಟವಿರಲಿಲ್ಲ. ಈ ಬಗ್ಗೆ ಆಗಾಗ್ಗೆ ಜಗಳವಾಗುತ್ತಿತ್ತು. ಖಾಸಗಿ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದವರು ಇಂದು ಸಂಬAಧಿಕರ ಮಗುವಿನ ನಾಮಕರಣ ಸಮಾರಂಭಕ್ಕೆ ಹೋಗಿ ಮನೆಗೆ ಬಂದಿದ್ದಾರೆ. ಮಧ್ಯಾಹ್ನ ನಂತರ ೩.೩೦ರ ವೇಳೆಗೆ ಯಶೋದ ಹಾಗೂ ಕುಂಞÂರಾಮ ಮನೆಯಲ್ಲಿ ಮಲಗಿದ್ದ ಸಂದರ್ಭ ಕತ್ತಿಯೊಂದಿಗೆ ಮನೆಗೆ ನುಗ್ಗಿದ ಚಂದು ಈರ್ವರನ್ನು ಕತ್ತಿಯಿಂದ ಕಡಿದಿದ್ದಾನೆ. ತೀವ್ರ ಗಾಯಗಳೊಂದಿಗೆ ರಕ್ತಸ್ರಾವಗೊಂಡು ಈರ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ಬಳಿಕ ಮನೆಯೊಳಗಿನಿಂದ ಹೊರಬರುತ್ತಿದ್ದ ಚಂದುವನ್ನು ಗಮನಿಸಿದ ಅಕ್ಕಪಕ್ಕದವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಭಾಗಮಂಡಲ ಪೊಲೀಸರು ಚಂದುವನ್ನು ಬಂದಿಸಿದ್ದಾರೆ.

ಎಸ್‌ಪಿ ಭೇಟಿ

ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಅಕ್ರಮ ಸಂಬAಧ ಕೊಲೆಗೆ ಕಾರಣವೆಂದು ಅವರು ತಿಳಿಸಿದ್ದು, ಈ ಸಂಬAಧ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಡಿವೈಎಸ್‌ಪಿ ಸೂರಜ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಪ್ರಬಾರ ಠಾಣಾಧಿಕಾರಿ ದಿನೇಶ್ ಇದ್ದರು.

- ಸುನಿಲ್ ಕುಯ್ಯಮುಡಿ