ಕಣಿವೆ, ಮಾ. ೧೧: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಸೇನಾನಿಗಳಾಗಿ ಸೇವೆಗೈವ ೧೮ ಪೌರ ಕಾರ್ಮಿಕರ ಕುಟುಂಬಗಳು ಜನತಾ ನಗರದಲ್ಲಿ ನಿರ್ಮಾಣ ಮಾಡಿರುವ ಶ್ರೀ ಪಟ್ಲದಮ್ಮ ದೇವತಾ ವಾರ್ಷಿಕ ಪೂಜೋತ್ಸವ ನಡೆಯಿತು.

ಈ ಸಂದರ್ಭ ಸ್ಥಳೀಯ ಪೋಷಕರಿಲ್ಲದ ಶಾಲಿನಿ ಎಂಬ ಹೆಣ್ಣು ಮಗಳನ್ನು ಗ್ರಾಮದ ದಿ. ರಂಗ ಎಂಬವರ ಪುತ್ರ ಸಿಜೇಶ್ ಎಂಬ ವರನಿಗೆ ಸಾರ್ವಜನಿಕರ ಸಮ್ಮುಖದಲ್ಲಿ ದೇವಾಲಯದ ಆವರಣದಲ್ಲಿ ವಿವಾಹ ಏರ್ಪಡಿಸಿದ್ದರು.

ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.