ಕಣಿವೆ, ಮಾ. ೧೧: ಸನಾತನ ಹಿಂದೂ ಧರ್ಮದ ರಕ್ಷಣೆ ಹಾಗೂ ಐಕ್ಯತೆಗಾಗಿ ಗಡಿಯಲ್ಲಿನ ಸೈನಿಕರ ಮಾದರಿಯಲ್ಲಿ ಹಿಂದೂ ಸಮಾಜದ ಯುವ ಶಕ್ತಿ ಸಂಘಟಿತರಾಗಿ ಹೋರಾಟ ನಡೆಸಬೇಕೆಂದು ಹಿಂದೂ ಜಾಗರಣಾ ವೇದಿಕೆ ಸಂಚಾಲಕ ಕಡಗದಾಳು ಮಹೇಶ್ ಕರೆಕೊಟ್ಟರು.
ಕುಶಾಲನಗರದ ಮುಳ್ಳುಸೋಗೆ ಮಂಡಲದ ವತಿಯಿಂದ ಗ್ರಾಮದ ಬಯಲು ಬಸವೇಶ್ವರ ದೇವಾಲಯದ ಬಳಿ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಶೋಭಾಯಾತ್ರೆ ಹಾಗೂ ಜನಜಾಗೃತಿ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಇಡೀ ಪ್ರಪಂಚದಲ್ಲಿ ಇರುವ ಒಂದೇ ಒಂದು ಹಿಂದೂ ರಾಷ್ಟçವನ್ನು ಯುವ ಶಕ್ತಿ ಜಗತ್ತಿನ ಸರ್ವ ಶ್ರೇಷ್ಠ ರಾಷ್ಟçವಾಗಿ ಕಟ್ಟುವ ಪಣತೊಡಬೇಕಿದೆ ಎಂದರು.
ಹಿAದೂಗಳಲ್ಲಿ ಇಂದಿಗೂ ಹಾಸುಹೊಕ್ಕಾಗಿರುವ ಜಾತಿಯ ವಿಷಬೀಜ ಕಿತ್ತೊಗೆದು ಪ್ರೀತಿಯ ನಾಡು ಕಟ್ಟಬೇಕಿದೆ ಎಂದರು. ಸೋದರತ್ವ - ಸಹಬಾಳ್ವೆ ಸಮರಸದ ಜೀವನ ನಮ್ಮದಾಗಬೇಕಿದೆ ಎಂದು ಮಹೇಶ್ ಕಡಗದಾಳು ಆಶಿಸಿದರು. ಅಧ್ಯಕ್ಷತೆ ವಹಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದ ಅಧ್ಯಕ್ಷ ಸುದೀಪ್ ಕುಮಾರ್ ಮಾತನಾಡಿ, ನಮ್ಮ ಮಕ್ಕಳಿಗೆ ನಾವು ಛತ್ರಪತಿ ಶಿವಾಜಿ, ಸಾಮ್ರಾಟ ಅಶೋಕ, ಶ್ರೀ ಕೃಷ್ಣದೇವರಾಯ ಮೊದಲಾದ ಮಹಾ ಪುರುಷರ ದೇಶಪ್ರೇಮ ಹಾಗೂ ಆದರ್ಶಗಳನ್ನು ಕಲಿಸುವ ಅನಿವಾರ್ಯತೆ ಇದೆ ಎಂದರು.
ಹಿಂದೂ ಸಂಗಮ ಆಯೋಜನಾ ಸಮಿತಿ ತಾಲೂಕು ಸಂಯೋಜಕ ದೇವಿ ಪ್ರಸಾದ್ ಮಾತನಾಡಿ, ಹಿಂದೂ ಬಾಂಧವರು ಗೋಪೂಜೆ ಹಾಗೂ ಪ್ರಕೃತಿ ಆರಾಧನೆಯ ಮೂಲಕ ನಾಡಿನ ಶ್ರೇಷ್ಠತೆಯನ್ನು ಎತ್ತಿ ಹಿಡಿಯಬೇಕು. ನಾಗರಿಕ ಶಿಷ್ಟಾಚಾರ, ಹಕ್ಕು ಮತ್ತು ಕರ್ತವ್ಯಗಳ ಪಾಲನೆ, ಕಾನೂನುಗಳ ಪಾಲನೆ ಮಾಡುವ ಮೂಲಕ ಶಿಸ್ತಿನ ಜೀವನ ನಡೆಸಲು ಕರೆಕೊಟ್ಟರು. ವೇದಿಕೆಯಲ್ಲಿ ನಿವೃತ್ತ ಕಂದಾಯ ಅಧಿಕಾರಿ ಯು.ಟಿ. ರಾಮಯ್ಯ, ನಿವೃತ್ತ ಆರೋಗ್ಯ ನಿರೀಕ್ಷಕಿ ತಾರಾವತಿ ಇದ್ದರು.