ವಾರ್ಷಿಕ ಹರಾಜಿನಲ್ಲಿ ರೂ. ೧೮ ಲಕ್ಷದ ೮೨ ಸಾವಿರ ರೂ ಕಡಿಮೆ ಆದಾಯ ಬಂದಿದೆ.
ಪುರಸಭೆಯ ಸಭಾಂಗಣದಲ್ಲಿ ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ ನೇತೃತ್ವದಲ್ಲಿ ವಾರ್ಷಿಕ ಹರಾಜು ನಡೆಯಿತು.
ಹರಾಜಿನಲ್ಲಿ ಭಾಗವಹಿಸಿದ ಮಳಿಗೆ ಆಕಾಂಕ್ಷಿಗಳು ಆಸಕ್ತಿ ವಹಿಸದ್ದರಿಂದ ಕಡಿಮೆ ಮೊತ್ತದ ಆದಾಯ ಪುರಸಭೆಗೆ ಲಭಿಸಿದೆ.
ಕಳೆದ ಸಾಲಿನ ಹರಾಜಿನಲ್ಲಿ ಪುರಸಭೆಗೆ ೩೮ ಲಕ್ಷದ ೩೪ ಸಾವಿರ ರೂ ಆದಾಯ ಬಂದಿದ್ದು ಈ ಬಾರಿ ಹಲವು ಮಳಿಗೆ ಕಡಿಮೆ ಮೊತ್ತಕ್ಕೆ ಹರಾಜಾದ್ದರಿಂದ ಈ ಬಾರಿ ಕಳೆದ ಸಾಲಿಗಿಂತ ಪುರಸಭೆಗೆ ೧೯ ಲಕ್ಷದ ೫೨ ಸಾವಿರ ರೂಗಳ ಕಡಿಮೆ ಆದಾಯ ಬಂದಿದೆ. ೪ ಹಸಿ ಮೀನು ಮಾರಾಟ ಮಳಿಗೆ, ಕುರಿಮಾಂಸದ ಮಳಿಗೆ ೫ ಮತ್ತು ಕೋಳಿ ಮಂಸದ ಮಳಿಗೆ ೩ ಮತ್ತು ವಾಹನ ಶುಲ್ಕ ಎತ್ತಾವಳಿ ಹರಾಜನ್ನು ಮುಂದಿನ ದಿನಗಳಲ್ಲಿ ಕರೆಯಲಾಗುತ್ತದೆ ಎಂದು ಪುರಸಭೆಯ ಮುಖ್ಯಾಧಿಕಾರಿ ನಾಚಪ್ಪ ಮಾಹಿತಿ ನೀಡಿದರು.
ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ ಬಿಡ್‌ದಾರರಾದ ಪಟ್ರಪಂಡ ರಘು ನಾಣಯ್ಯ, ಪಿ.ಕೆ. ಮಹಮ್ಮದ್ ಮತ್ತಿತರರು ಮಾತನಾಡಿ ಗ್ರಾಮ ಪಂಚಾಯಿತಿಯಲ್ಲಿ ೨೫ ಸಾವಿರದಂತೆ ವಾರ್ಷಿಕ ಹರಾಜಿನಲ್ಲಿ ವಹಿವಾಟಿಗೆ ಅವಕಾಶ ಇದೆ. ಆದರೆ ಪುರಸಭೆಯಲ್ಲಿ ೨೫ ಲಕ್ಷಕ್ಕೂ ಹೆಚ್ಚು ಹಣ ಕಟ್ಟಿ ಮಳಿಗೆ ಪಡೆದು ಮೀನು ಇತ್ಯಾದಿಯನ್ನು ಜನರಿಗೆ ಕಡಿಮೆ ಬೆಲೆಯಲ್ಲಿ ನೀಡಲು ಹೇಗೆ ಸಾಧ್ಯ. ಈ ಬಗ್ಗೆ ಪುರಸಭೆ ಸೂಕ್ತ ನಿರ್ಧಾರ ತಳೆಯಬೇಕೆಂದು ಆಗ್ರಹಿಸಿದರು.
ಬಿಡ್‌ದಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ನಾಚಪ್ಪ ಅವರು, ಆರ್ಜಿ ಮತ್ತು ಬೇಟೋಳಿ ಭಾಗದಲ್ಲಿ ಮೀನು ಮಳಿಗೆಗಳನ್ನು ಗ್ರಾಮ ಪಂಚಾಯಿತಿಯಿAದ ಪರವಾನಗಿ ಪಡೆದು ನಡೆಸುತ್ತಿದ್ದಾರೆ. ಇಲ್ಲಿ ನಡೆಯುವ ಪ್ರಕ್ರಿಯೆಗೂ ಅದಕ್ಕೂ ಸಂಬAಧವಿಲ್ಲ. ಹಿಂದಿನಿAದ ಈ ರೀತಿ ಹರಾಜು ನಡೆಯುತ್ತಿದ್ದು ನಿಯಮದಂತೆ ನಾವು ಹೆಚ್ಚಿನ ದರವನ್ನು ಹರಾಜಿನಲ್ಲಿ ಪಡೆಯಬೇಕಿದೆ ಎಂದರು.
ಮಾರುಕಟ್ಟೆ ಮಳಿಗೆಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕು. ಅಲ್ಲದೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಮಾರುಕಟ್ಟೆಯಲ್ಲಿ ಮಾಂಸ ಮಳಿಗೆಗಳನ್ನು ನಡೆಸುತ್ತಿರುವಾಗ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಮಾಂಸದ ಅಂಗಡಿಗಳಿಗೆ ಪರವಾನಗಿ ನೀಡಬಾರದು.
ಮಾರುಕಟ್ಟೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸದೆ ಇದ್ದರೆ ಗ್ರಾಹಕರು ಬರಲು ಹಿಂದೇಟು ಹಾಕುತ್ತಾರೆ. ಇದನ್ನು ಪುರಸಭೆ ಗಂಭೀರವಾಗಿ ಪರಿಗಣಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಈ ಸಂದರ್ಭ ಕೆಲವು ವರ್ತಕರು ಸಭೆಯಲ್ಲಿ, ಪಂಜರುಪೇಟೆಯಲ್ಲಿ ಮುಖ್ಯ ರಸ್ತೆಯಲ್ಲಿ ಅಂಗಡಿ ಮುಂದೆ ವಾಹನ ನಿಲುಗಡೆ ಮಾಡುತ್ತಿರುವುದರಿಂದ ನಮಗೆ ಮತ್ತು ಸಾರ್ವಜನಿಕರಿಗೆ ಇತರ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದರು. ಆಗ ಮುಖ್ಯಧಿಕಾರಿ ಪಾದಚಾರಿ ರಸ್ತೆ ಅಭಿವೃದ್ಧಿಗೆ ೨೭ ಲಕ್ಷ ರೂ ಗಳ ಟೆಂಡರ್ ಕರೆಯಲಾಗಿದ್ದು ಕಾಮಗಾರಿ ಆರಂಭಿಸಲಾಗುತ್ತದೆ ಎಂದರು.
ಹರಾಜು ಪ್ರಕ್ರಿಯೆಯಲ್ಲಿ ಪುರಸಭೆ ಕಂದಾಯಧಿಕಾರಿ ವಿ.ಕೆ. ಸೋಮಶೇಖರ್, ಪರಿಸರ ಅಭಿಯಂತರ ರೀತು ಸಿಂಗ್, ಸಿಬ್ಬಂದಿಗಳಾದ ಕೆ.ಎಂ. ಸುಲೇಖ, ಎಂ.ಯು ರಜನಿ, ಐವಾನ್, ವ್ಯವಸ್ಥಾಪಕರಾದ ಕೆ.ಬಿ. ಸುಜಾತ ಮತ್ತಿತರರು ಕಾರ್ಯನಿರ್ವಹಿಸಿದರು.