ನಾಪೋಕ್ಲು, ಮಾ. ೧೨: ಕೊಡವ ಹಾಕಿ ನಮ್ಮೆ ೨೦೨೫ ರಲ್ಲಿ ನಡೆದ ಮುದ್ದಂಡ ಹಾಕಿ ಉತ್ಸವದ ಒಂದು ಕೋಟಿ ಅನುದಾನದ ಚೆಕ್ ಅನ್ನು ಎ.ಎಸ್. ಪೊನ್ನಣ್ಣ ಗುರುವಾರ ವಿತರಿಸಿದರು.

ಮುದ್ದಂಡ ಕಪ್ ಕೊಡವ ಹಾಕಿ ನಮ್ಮೆ ೨೦೨೫ ರಲ್ಲಿ ನಡೆದಿದ್ದು, ಉತ್ಸವಕ್ಕೆ ಸರ್ಕಾರದಿಂದ ಬಿಡುಗಡೆಯಾದ ಒಂದು ಕೋಟಿ ರೂಗಳ ಚೆಕ್‌ನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ವಿಧಾನ ಸೌಧದಲ್ಲಿ ಮುದ್ದಂಡ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ, ನಿರ್ದೇಶಕರಾದ ಕುಲ್ಲೇಟಿರ ಅರುಣ್ ಬೇಬ, ಕಲಿಯಂಡ ಸಂಪನ್ ಅಯ್ಯಪ್ಪ, ಮುಕ್ಕಾಟಿರ ಸೋಮಯ್ಯ, ಮುದ್ದಂಡ ರಶಿನ್, ಲೀನಾ ಪೂಣಚ್ಚ, ರಂಜಿತ್ ಪೊನ್ನಪ್ಪ, ಕಾವೇರಿ, ಫ್ಯಾನ್ಸಿ, ಆದರ್ಶ್, ಅಶೋಕ್, ದಿವ್ಯ, ವಿನೀತ್, ಮುತ್ತಪ್ಪ, ವಾಣಿ ಮತ್ತಿತರರು ಇದ್ದರು