ಶನಿವಾರಸಂತೆ, ಮಾ. ೧೭: ಪಟ್ಟಣದ ಶ್ರೀರಾಮ ಮಂದಿರ ಸೇವಾ ಸಮಿತಿ ವತಿಯಿಂದ ಶ್ರೀರಾಮ ನವಮಿ ಪ್ರಯುಕ್ತ ಮಂದಿರದಲ್ಲಿ ತಾ.೧೯ ರಿಂದ ೨೭ ರವರೆಗೆ ಪ್ರತಿದಿನ ಶ್ರೀರಾಮ-ಲಕ್ಷö್ಮಣ, ಸೀತೆ, ಆಂಜನೇಯ ದೇವರಿಗೆ ವಿಶೇಷ ವಿವಿಧ ಅಲಂಕಾರದೊAದಿಗೆ ಪೂಜಾ ಮಹೋತ್ಸವ ನೆರವೇರಲಿದೆ.
ತಾ. ೧೯ ರಿಂದ ೨೪ರ ತನಕ ವಿವಿಧ ಅಲಂಕಾರ ಸೇವೆ ನಡೆಯಲಿದ್ದು, ತಾ. ೨೭ ರಂದು ಶ್ರೀರಾಮ ನವಮಿ ಆಚರಣೆ ಪ್ರಯುಕ್ತ ಬೆಳಿಗ್ಗೆ ೮ ಗಂಟೆಯಿAದ ಅಭಿಷೇಕ, ಹೋಮ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ. ಮಧ್ಯಾಹ್ನ ೩-೩೦ ಗಂಟೆಗೆ ದೇವರ ಮೂರ್ತಿಗಳನ್ನು ಅಡ್ಡಪಲ್ಲಕ್ಕಿಯ ಮೂಲಕ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು ಎಂದು ಶ್ರೀರಾಮ ಮಂದಿರ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.