ವೀರಾಜಪೇಟೆ, ಮಾ. ೧೭: ವೀರಾಜಪೇಟೆ ನ್ಯಾಯಾಲಯಗಳ ಸಮುಚ್ಚಯದಲ್ಲಿ ನಡೆದ ರಾಷ್ಟಿçÃಯ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಒಟ್ಟು ೨೩೨ ಪ್ರಕರಣಗಳು ಇತ್ಯರ್ಥಗೊಂಡು ಈ ಪ್ರಕರಣಗಳಲ್ಲಿ ರೂ. ೧,೫೭೬,೩೮.೫೨ ಹಣ ಸಂದಾಯವಾಗಿದೆ.

ವೈವಾಹಿಕ ವಿವಾದ ದಾವೆಗಳು, ಸಿವಿಲ್ ಮೊಕದ್ದಮೆಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಕಾಯಿದೆ ಪ್ರಕರಣ, ಗೃಹ ಹಿಂಸಾಚಾರ ಕಾಯಿದೆ ಪ್ರಕರಣಗಳು, ಲಾಟರಿ ಕಾಯಿದೆ ಪ್ರಕರಣ, ಕಂದಾಯ ಪ್ರಕರಣ, ಗಣಿ ಮತ್ತು ಖನಿಜ ನಿಯಂತ್ರಣ ಕಾಯಿದೆ ಪ್ರಕರಣಗಳು ಹಾಗೂ ಇತರೆ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಒಟ್ಟು ೭೨೨ ಪ್ರಕರಣಗಳನ್ನು ಆಯ್ದು ಕೊಂಡಿದ್ದು, ಇದರಲ್ಲಿ ಒಟ್ಟು ೨೩೨ ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡವು.

ಬ್ಯಾAಕಿAಗ್ ಪೂರ್ವ ದಾವೆ ಪ್ರಕರಣಗಳಲ್ಲಿ ಒಟ್ಟು ೩೯೦ ಪ್ರಕರಣಗಳು ಇತ್ಯರ್ಥಗೊಂಡು ರೂ. ೭೫,೫೪೭,೫೯ ಮೊತ್ತ ಸದರಿ ಪ್ರಕರಣಗಳಲ್ಲಿ ಇತ್ಯರ್ಥಗೊಂಡಿದೆ.

ರಾಷ್ಟಿçÃಯ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರಾದ ಎಸ್. ನಟರಾಜ್, ಆರ್. ಮಂಜುನಾಥ್, ಪ್ರದೀಪ ಪೋತದಾರ್, ವಕೀಲ ಸಂಧಾನಕಾರರಾಗಿ ಅಮೃತ್ ಸೋಮಯ್ಯ, ಸಿಂಧೂರ ಎನ್. ಸ್ವಾಮಿ, ಮತ್ತು ಸಿ.ಪಿ. ವಿದ್ಯಾ ಅವರುಗಳು ಭಾಗವಹಿಸಿದ್ದರು.