ಮೂಲತಃ ಮುಟ್ಲು ಗ್ರಾಮ ನಿವಾಸಿ, ಮಡಿಕೇರಿಯ ಐಟಿಐ ಹಿಂಭಾಗದಲ್ಲಿ ನೆಲೆಸಿದ್ದ ಮಾಜಿ ಯೋಧ ಓಡಿಯಂಡ ಸಿ, ಮಾದಪ್ಪ (೮೭) ತಾ. ೧೭ ರಂದು ನಿಧನರಾದರು. ಮೃತರು ಎನ್‌ಸಿಸಿ ಹಾಗೂ ಮೈಸೂರು ಸ್ಟೇಟ್ ರಿಸರ್ವ್ ಪೊಲೀಸರಾಗಿಯೂ ಸೇವೆ ಸಲ್ಲಿಸಿದ್ದಲ್ಲದೆ, ಕೊಡಗಿನ ಸಾಂಪ್ರದಾಯಿಕ ಹುತ್ತರಿ ಹಬ್ಬಾಚರಣೆ ಸಂದರ್ಭ ಮಡಿಕೇರಿ ಕೊಡವ ಸಮಾಜದ ಪರವಾಗಿ ಸುಮಾರು ೩೩ ವರ್ಷಗಳ ಕಾಲ ಕದಿರು ಹೊರುವ ಕುತ್ತಿ ತೆಗೆಯುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಮೃತರು ಈರ್ವರು ಪುತ್ರರನ್ನು ಅಗಲಿದ್ದಾರೆ.