ಮಡಿಕೇರಿ, ಮಾ. ೨೧: ಸಾಲಿಗ್ರಾಮದ ಡಿವೈನ್ ಪಾರ್ಕ್ನ ವಿವೇಕ ಜಾಗೃತ ಬಳಗದ ವತಿಯಿಂದ ತಾ..೨೨ ರಂದು(ಇAದು) ದಿವ್ಯ ಗಾನಾಮೃತ ಎನ್ನುವ ಸತ್ಸಂಗ ಮತ್ತು ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬಳಗದ ಕೊಡಗು ಜಿಲ್ಲಾದಕ್ಷ ಸೇವಕಿ ದಿವ್ಯ ತೇಜ ಕುಮಾರ್; ಅಂದು ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೧.೩೦ ಗಂಟೆಯವರೆಗೆ ಮಡಿಕೇರಿಯ ಕಾವೇರಿ ಹಾಲ್ನಲ್ಲಿ ನಡೆಯುವ ಕಾರ್ಯಕ್ರಮವನ್ನು ಕೋಟದ ಯೋಗಬನದ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ಎಂಡಿ ಮತ್ತು ಸಿಇಒ ಆದ ಡಾ. ವಿವೇಕ ಉಡುಪ ಮತ್ತು ಡಿವೈನ್ ಪಾರ್ಕ್ ಟ್ರಸ್ಟ್ನ ಸಿಸ್ಟರ್ ನಿವೇದಿತಾ ರಾಜ್ ಮತ್ತು ಬಳಗದ ಸದಸ್ಯರು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
ವಿವೇಕ ಜಾಗೃತ ಬಳಗದ ಜಿಲ್ಲೆಯ ಐದು ಬಳಗಗಳಿಂದ ಆಯೋಜಿತವಾಗಿರುವ ಕಾರ್ಯಕ್ರಮದ ಪ್ರಮುಖ ಉದ್ದೇಶ, ಸನಾತನ ಹಿಂದೂ ಧರ್ಮದ ಭವ್ಯ ಪರಂಪರೆಯ ಮಹಿಮೆಯನ್ನು ಜಾಗೃತಗೊಳಿಸವುದು ಮತ್ತು ಅಧ್ಯಾತ್ಮಿಕ ಮಹತ್ವವನ್ನು ಎತ್ತಿ ಸಾರುವುದಾಗಿದೆ. ಇದರೊಂದಿಗೆ ಶ್ರೀ ರಾಮಕೃಷ್ಣ ಪರಮಹಂಸ ಮತ್ತು ಶ್ರೀ ಶಾರದಾಮಾತೆ ಮತ್ತು ಶ್ರೀ ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಜನರಿಗೆ ತಲುಪಿಸುವುದೇ ಆಗಿದೆಯೆಂದು ತಿಳಿಸಿದರು.
ಗೋಷ್ಠಿಯಲ್ಲಿ ವಿವೇಕ ಜಾಗೃತ ಬಳಗದ ಸಿ.ಕೆ.ಪ್ರಭಾವತಿ, ಲೀಲಾಶೆಟ್ಟಿ, ಬಿ.ಕೆ.ಸುಲೋಚನಾ, ಸಿ.ಎಂ.ಅಕ್ಕಮ್ಮ ಉಪಸ್ಥಿತರಿದ್ದರು.