ಮಡಿಕೇರಿ, ಮಾ. ೨೧: ಕೊಡಗು ಜಿಲ್ಲೆ ಹಾಗೂ ಇಲ್ಲಿನ ಜನರ ಬಗ್ಗೆ ಹಿಂದಿನಿAದಲೂ ತಮಗೆ ಅಭಿಮಾನವಿತ್ತು, ಇದೀಗ ಕೊಡಗಿನಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶ ದೊರೆತಿದ್ದು, ತಮಗೆ ಸಂತಸ ತಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಅಭಿಪ್ರಾಯ ಹಂಚಿಕೊAಡರು.
ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವತಿಯಿಂದ ಇಂದು ಕೊಡವ ಸಮಾಜದಲ್ಲಿ ಜರುಗಿದ ಪೊಮ್ಮಕ್ಕಡ ನಾಳ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಾವು ಈ ಹಿಂದೆ ಬೆಂಗಳೂರು ಕೊಡವ ಸಮಾಜದ ಆಶ್ರಯದಲ್ಲಿ ನಡೆಸುತ್ತಿರುವ ಕಾವೇರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾಗಿ ಸ್ಮರಿಸಿದ ಅವರು ಇದರಿಂದಾಗಿ ಕೊಡವ ಸಮಾಜದ ಬಗ್ಗೆ ಅರಿವು ಇತ್ತು.
ಚಿಕ್ಕಂದಿನಲ್ಲಿ ಕೊಡವ ಭಾಷೆಯನ್ನೂ ಒಂದಷ್ಟು ಕಲಿತಿದ್ದು, ಇದೀಗ ಅಭ್ಯಾಸ ಬಿಟ್ಟುಹೋಗಿದೆ. ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಣೆಯ ಅವಕಾಶದ ನಡುವೆ ಕೊಡವ ಭಾಷೆಯನ್ನು ಕಲಿಯುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಪೊಲೀಸ್ ಇಲಾಖೆಯ ಕರ್ತವ್ಯ ನಿರ್ವಹಣೆಗೆ ಸಮಾಜ ಹಾಗೂ ಜನಾಂಗದವರ ಸಹಾಯ ಹಸ್ತ ಇರಲಿ ಎಂದೂ ಅವರು ಆಶಿಸಿದರು.
ಮತ್ತೋರ್ವ ಅತಿಥಿ ಏರ್ಮಾರ್ಷಲ್ ಕೆ.ಸಿ. ಕಾರ್ಯಪ್ಪ ಅವರ ಪತ್ನಿ, ಕೊಡಗು ವಿದ್ಯಾಲಯ ಆಪರ್ಚುನಿಟಿ ಶಾಲೆಯ ಪ್ರಮುಖರಾಗಿರುವ ಮೀನಾ ಕಾರ್ಯಪ್ಪ ಅವರು ಮಾತನಾಡಿ, ಮಹಿಳಾ ಶಕ್ತಿ ಉತ್ತಮವಾಗಿದೆ. ಪೊಮ್ಮಕ್ಕಡ ಕೂಟದಂತಹ ಸಂಘಟನೆಯ ಮೂಲಕ ಸಂಘಟನಾತ್ಮಕವಾದ ಕೆಲಸ ಕಾರ್ಯಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
“ಪೊಮ್ಮಕ್ಕಡ ಬೊಳಚೆಕ್ ಬಟ್ಟೆಬೊಳಿ'' ಎಂಬ ವಿಷಯದ ಕುರಿತು ವಿಚಾರ ಮಂಡನೆ ಮಾಡಿದ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಅಜ್ಜಿಕುಟ್ಟಿರ ಸೌಮ್ಯ ಪೊನ್ನಪ್ಪ ಅವರು ಮಾತನಾಡಿ, ಕೊಡಗಿನಲ್ಲಿ ಕೊಡವ ಜನಾಂಗದ ಮಹಿಳೆಯರು ಸಾಕಷ್ಟು ಸಾಧನೆ ಮಾಡಿದ್ದಾರೆ.
ಆದರೂ ಇದು ಸಾಲದು ಸಂಘಟನೆ, ಕೌಶಲ್ಯಾವೃದ್ಧಿ, ಅಗತ್ಯ ಜ್ಞಾನದೊಂದಿಗೆ ಇರುವ ಅವಕಾಶಗಳ ಬಗ್ಗೆ ಮಾಹಿತಿ ಪಡೆದು ಮುಂದೆ ಬರುವಂತೆ ಕರೆ ನೀಡಿದರು.
ರಾಷ್ಟಿçÃಯ ಚಲನಚಿತ್ರ ಪ್ರಶಸ್ತಿ ವಿಜೇತೆ ಕೊಟ್ಟುಕತ್ತಿರ ಯಶೋಧ ಕಾರ್ಯಪ್ಪ ಅವರು ಮಹಿಳೆಯಾಗಿ ಆತ್ಮಾಭಿಮಾನವಿದೆ, ಮಹಿಳೆಯರು ಸಂಸಾರದ ನಿರ್ವಹಣೆಯ ಜವಾಬ್ದಾರಿಯೊಂದಿಗೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆಂದರು.
ಮಾಜಿ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಕೊಡವ ಸಮಾಜದ ಅಧ್ಯಕ್ಷ ಎಂ.ಪಿ. ಮುತ್ತಪ್ಪ, ಕೊಡಗು ವಿದ್ಯಾಲಯ ಆಪರ್ಚುನಿಟಿ ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಕೇಟೋಳಿರ ವೀಣಾ ಚಂಗಪ್ಪ, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ, ಕಾರ್ಯದರ್ಶಿ ಕೂಪದಿರ ಜೂನಾ ವಿಜಯ್ ಸೇರಿದಂತೆ ಕೂಟದ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಎಸ್ಪಿ ಬಿಂದುಮಣಿ, ಮೀನಾ ಕಾರ್ಯಪ್ಪ, ಯಶೋಧ ಕಾರ್ಯಪ್ಪ, ಸೌಮ್ಯ ಪೊನ್ನಪ್ಪ ಅವರುಗಳನ್ನು ಈ ಸಂದರ್ಭ ಸನ್ಮಾನಿಸಿ, ಗೌರವಿಸಲಾಯಿತು. ಪೊಮ್ಮಕ್ಕಡ ನಾಳ್ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸದಸ್ಯರು ಪಾಲ್ಗೊಂಡಿದ್ದರು.
ಈ ಹಿಂದೆ ನಡೆದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಚೆಟ್ರಂಡ ವಸಂತಿ ತಂಡ ಪ್ರಾರ್ಥಿಸಿ, ಕನ್ನಂಡ ಕವಿತಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಚೋಕಿರ ಅನಿತಾ ನಿರೂಪಿಸಿ, ಕೂಪದಿರ ಜೂನಾ ವಿಜಯ್ ವಂದಿಸಿದರು.