ಶ್ರೀಮಂಗಲ, ಮಾ. ೨೨: ಕೊಡಗು ಮತ್ತು ಕೊಡವ ಜನಾಂಗದ ಹಿತಾಸಕ್ತಿ ಕಾಪಾಡುವ, ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ೧೯೪೨ ರಲ್ಲಿ ಸ್ಥಾಪನೆಯಾದ ಕೊಡವ ಜನಾಂಗದ ತಕ್ಕಾಮೆ ಮೂಲಕ ಪ್ರಾತಿನಿಧಿಕ ಸಂಸ್ಥೆಯಾದ ಅಖಿಲ ಕೊಡವ ಸಮಾಜದ ನೂತನ ಅಧ್ಯಕ್ಷರಾದ ಪರದಂಡ ಸುಬ್ರಮಣಿ ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ಅವಿರೋಧವಾಗಿ ರಚನೆ ಮಾಡಲಾಗಿದೆ.

ಈಗಾಗಲೇ ಜಿಲ್ಲೆಯ ವಿವಿಧ ಭಾಗಗಳಿಂದ ಆಯ್ಕೆ ಮಾಡಲಾದ ಕೇಂದ್ರ ಸಮಿತಿಯ ೪೨ ಸದಸ್ಯರ ಸಭೆಯಲ್ಲಿ ಕಾರ್ಯಕಾರಿ ಮಂಡಳಿ ರಚನೆ ಮಾಡಲಾಗಿದೆ.

ಅಧ್ಯಕ್ಷರಾಗಿ ದೇಶತಕ್ಕರಾದ ಪರದಂಡ ಸುಬ್ರಮಣಿ ಕಾವೇರಪ್ಪ, ಉಪಾಧ್ಯಕ್ಷರಾಗಿ ಪೋರೆರ ಬಿದ್ದಪ್ಪ, ಗೌರವ ಕಾರ್ಯದರ್ಶಿಯಾಗಿ ಚೊಟ್ಟಂಡ ಪ್ರಭು ಸೋಮಯ್ಯ, ಜಂಟಿ ಕಾರ್ಯದರ್ಶಿಗಳಾಗಿ ಚೇಂದ್ರಿಮಾಡ ಡಿ. ಪೃಥ್ವಿ ಮತ್ತು ಮನ್ನೇರ ಸರಸ್ವತಿ ರಮೇಶ್, ಖಜಾಂಚಿಯಾಗಿ ಕಾಯಪಂಡ ಸುನಿಲ್, ಕಾನೂನು ಸಲಹೆಗಾರರಾಗಿ ಕುಟ್ಟಂಡ ವಿಜಯ ಉತ್ತಪ್ಪ ಅವರು ಆಯ್ಕೆಯಾಗಿದ್ದಾರೆ.

ಶನಿವಾರ ವೀರಾಜಪೇಟೆ ಕಾವೇರಿ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಆಡಳಿತ ಮಂಡಳಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.