ವೀರಾಜಪೇಟೆ, ಮಾ. ೨೨: ಸಮಾಜದಲ್ಲಿ ಹೆಣ್ಣನ್ನು ಸಮಾನತೆಯಿಂದ ನೋಡಿ ಗೌರವ ಆದರಗಳೊಂದಿಗೆ ನಡೆಸಿಕೊಳ್ಳುವುದರಿಂದ ಉತ್ತಮ ಸಮಾಜವು ನಿರ್ಮಾಣವಾಗು ವುದರೊಂದಿಗೆ ಸ್ತಿçÃಯರು ಇನ್ನಷ್ಟು ಮುನ್ನೆಲೆಗೆ ಬರಲು ಸಹಕಾರಿಯಾಗುತ್ತದೆ ಎಂದು ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದ ಸ್ತಿçà ರೋಗ ಮತ್ತು ಪ್ರಸುತಿ ತಜ್ಞೆ ಡಾ. ಗ್ರೀಷ್ಮ ಬೋಜಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಾಜಪೇಟೆ ಕಾವೇರಿ ಕಾಲೇಜು, ಐಕ್ಯೂಎಸಿ ಮತ್ತು ಮಹಿಳಾ ಕೋಶದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳು ಮುನ್ನೆಲೆಗೆ ಬರುವಲ್ಲಿ ಸಮಾಜದ ಪಾತ್ರ ಬಹಳ ಮುಖ್ಯವಾಗಿದ್ದು. ಸಮಾಜದಲ್ಲಿ ಹೆಣ್ಣಿಗೆ ಶಿಕ್ಷಣ, ಸಮಾನತೆ ಹಾಗೂ ಅವಕಾಶ ದೊರೆತಾಗ ಎಲ್ಲಾ ಕ್ಷೇತ್ರದಲ್ಲಿಯೂ ಅವಳು ಸಕ್ರಿಯಳಾಗಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮ ಚಾಪು ಮೂಡಿಸಿದ್ದು, ಗೃಹಿಣಿಯಾಗಿ ಮನೆ ನಡೆಸುವಲ್ಲಿಂದ ರಾಷ್ಟçದ ಅಧ್ಯಕ್ಷರಾಗಿ ದೇಶವನ್ನು ಯಶಸ್ವಿಯಾಗಿ ಮುನ್ನಡೆಸುತಿದ್ದಾರೆ ಎಂದರು.
ನಂತರ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹದಿಹರೆಯದ ಹೆಣ್ಣು ಮಕ್ಕಳ ಆರೋಗ್ಯ ಸಮಸ್ಯೆಗಳು ಎಂಬ ವಿಷಯದ ಕುರಿತು ವಿದ್ಯಾರ್ಥಿನಿಯರೊಂದಿಗೆ ಮುಕ್ತವಾಗಿ ಗರ್ಭಕೋಶದ ಕ್ಯಾನ್ಸರ್‌ಗೆ ಸಂಬAಧಪಟ್ಟ ಲಸಿಕೆಯ ಉಪಯೋಗ, ರಕ್ತ ಹೀನತೆಯಿಂದ ಬಳಲುತ್ತಿರುವವರಿಗೆ ಸರಕಾರದ ವತಿಯಿಂದ ನೀಡಲಾಗುತ್ತಿರುವ ಔಷಧ, ಪೋಕ್ಸೊ ಕಾಯ್ದೆ, ಋತುಚಕ್ರ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆ ಮತ್ತು ನೈರ್ಮಲ್ಯದ ಕುರಿತು ಚರ್ಚಿಸಿದರು.
ವೀರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ಡಾನ ಮಾತನಾಡಿ, ಹೆಣ್ಣನ್ನು ಗೌರವದಿಂದ ಕಾಣಬೇಕು. ಮಹಿಳೆಯರ ಯಶಸ್ಸಿಗೆ ಸರಿಯಾದ ಮಾರ್ಗ ಹಾಗೂ ಸಹಕಾರವನ್ನು ನೀಡಿದರು ಅವರು ತಾವು ಬೆಳೆಯುವುದರೊಂದಿಗೆ ತಮ್ಮೊಂದಿಗೆ ಇತರರನ್ನು ಬೆಳೆಸುತ್ತಾರೆ. ಇಂದು ಹೆಣ್ಣು ಎಲ್ಲಾ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುತಿದ್ದಾಳೆ. ಆದರಿಂದ ಹೆಣ್ಣು ಎಂದು ನಿರ್ಲಕ್ಷ ತೊರದೆ ಆಕೆಯ ಬೆಳವಣಿಗೆಗೆ ಎಲ್ಲಾ ರೀತಿಯ ಸಹಕಾರ, ಬೆಂಬಲ ನೀಡುವುದು ಸಮಾಜ ಹಾಗೂ ಕುಟುಂಬದ ಕರ್ತವ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ಕೆ. ಪದ್ಮ ಹೆಣ್ಣು ಅಬಲೆಯಲ್ಲ ಸಬಲೆ. ಹೆಣ್ಣು ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಪುರುಷರಿಗೆ ಸಮಾನÀಳಾಗಿ ಹೆಜ್ಜೆ ಹಾಕುತಿದ್ದಾಳೆ. ಹೆಣ್ಣು ಸಶಕ್ತಗೊಳ್ಳಬೇಕು ಏಕೆಂದರೆ ಪುರುಷರ ಪತನಕ್ಕಾಗಿ ಅಲ್ಲ ಬದಲಾಗಿ ಉತ್ತಮ ಕುಟುಂಬ ಹಾಗೂ ಸಮ ಸಮಾಜದ ನಿರ್ಮಾಣಕ್ಕೆ ಎಂದರು.
ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳಾ ಸಿಬ್ಬಂದಿಗಳಿಗೆ ಆಯೋಜಿಸಲಾಗಿದ್ದ ವಿವಿಧ ಸ್ಪರ್ದೆಯ ವಿಜೇತರಿಗೆ ಗಣ್ಯರಿಂದ ಬಹುಮಾನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿ ಮುಖ್ಯಸ್ಥರಾದ ಡಾ. ಕೆ.ಜಿ. ವೀಣಾ, ಮಹಿಳಾ ಕೋಶದ ಸಂಚಾಲಕಿ ಲೆ. ಬಿ.ಬಿ. ಬೋಜಮ್ಮ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ಕೋಶದ ಸದಸ್ಯರಾದ ವನಿತಾ, ಮಾಣಿಕ್ಯ, ಉಪನ್ಯಾಸಕಿಯರು, ಆಡಳಿತಾತ್ಮಕ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.