ಮಡಿಕೇರಿ, ಮಾ. ೨೨: ಕೊಡಗು ಗೌಡ ಹಿತರಕ್ಷಣಾ ಸಮಿತಿ ವತಿಯಿಂದ ಮಡಿಕೇರಿಯಲ್ಲಿ ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಭಾಗವಹಿಸಿದರು.

ಈ ಕಾರ್ಯಕ್ರಮದಲ್ಲಿ ಶಾಸಕರನ್ನು ಕೊಡಗು ಗೌಡ ಹಿತರಕ್ಷಣಾ ಸಮಿತಿ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ಇದೇ ವೇದಿಕೆಯಲ್ಲಿ ಸಮುದಾಯದ ಇತರ ಸಾಧಕರಿಗೆ ಸಹ ಸನ್ಮಾನ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ತೀತಿರ ಧರ್ಮಜ ಉತ್ತಪ್ಪ, ಕೊಡಗು ಗೌಡ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು ಪರ್ಮಲೆ ಗಣೇಶ್, ಉಪಾಧ್ಯಕ್ಷರು ದಂಬೆಕೋಡಿ ಕವನ ಭೀಷ್ಮ, ರವಿಕುಮಾರ್, ಗೌರವ ಅಧ್ಯಕ್ಷರು ಪಿಎಲ್ ಸುರೇಶ್, ಪ್ರಧಾನ ಕಾರ್ಯದರ್ಶಿ ಪೂಜಾರಿರಾ ಪ್ರದೀಪ್ ಕುಮಾರ್, ಕಾರ್ಯದರ್ಶಿ ತುಳಸಿ ಗಾಂಧಿ ಪ್ರಸಾದ್, ನಿರ್ದೇಶಕರು ರಿತೀನ್, ಕವನ್, ಸೌಮ್ಯ ರಾಕೇಶ್, ಲೋಹಿತ್, ಕೊಡಗು ಗೌಡ ಸಮಾಜದ ಅಧ್ಯಕ್ಷರು ದಂಬೆಕೋಡಿ ಆನಂದ್, ಸುಮಿತ್ರ ನಿಂಗರಾಜ್, ಪ್ರಸನ್ನ ಎಡಿಕೇರಿ, ಕೆದಂಬಾಡಿ ಕಾಂಚನ ಗೌಡ, ಪಟ್ಟಡ ದೀಪಕ್, ಸೂರಜ್ ಹೊಸೂರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.